ಸೋಮವಾರ, ಏಪ್ರಿಲ್ 13, 2026

ಸಂಚಿಕೆ - ೧೬

ಹಂಚು

ಹಂಚು ಇದು ಬರಿಯ ಹಂಚಲ್ಲ 

ನೂರಾರು ಕಾರ್ಮಿಕರ ಬೆವರಿನ ಫಲ 

ಎಷ್ಟೋ ಕನಸಿನ ಗೂಡಿನ ಆಸರೆ ಹಂಚು


ಕನಸೆಂಬ ಮಣ್ಣಿನ ರಾಶಿಯ ಹೊಯ್ದು 

ಕಾಲಚಕ್ರದಂತಿರುವ ಯಂತ್ರಕ್ಕೆ ಸಿಲುಕಿ 

ಸುಖದುಃಖಗಳಂತೆ ಒಂದಾಗಿ ಸಮನಾಗಿ ಬೆರೆತು


ಹಂತ ಹಂತವಾಗಿ ಏರಿಳಿತಗೊಂಡು ಮುದ್ದೆಯಾಗಿ 

ಜೀವನವೆಂಬ ಪರಿಪೂರ್ಣವಾದ ಅಚ್ಚಿನೊಳು ಸೇರಿ 

ಬೆಂಕಿಯಲ್ಲಿ ಸುಟ್ಟು ಬೆಂದುಗಟ್ಟಿಯಾಗಿ


ಅಪರಿಪೂರ್ಣತೆಯಿಂದ ಪೂರ್ಣರೂಪವ ಹೊಂದಿ 

ನೆರಳಾಗಿ ಆಸರೆಯಾಗಿ ನಿಂತಿದೆ 

ಮಳೆ ಬಿಸಿಲಿಗೆ ಬೆದರದೆ ಗಟ್ಟಿಯಾಗಿ ನಿಂತಿದೆ ಹಂಚು.


ಪೂಜಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...