ಹೆಣ್ಣೆಂಬ ಮಾಯೆ
ಮಾಯೆ ಎಂದರು ಅವಳನ್ನು,
ಬಲೆಗೆ ಸಿಲುಕಿದ ಮರುಳರು,
ಗಂಗೆ, ತುಂಗೆ, ಕಪಿಲೆ ಎಂದರು.
ಚರಿತ್ರೆಗೆ ಸೇರಿದ ಪೂರ್ವಜರು
ಅಂದಿಗಾಯಿತು ಅಂದಿನ ಮಾತು
ಕಂಡಿಹೆವು ಶುದ್ಧತೆಯ ಬರಿ ನದಿಗಳದ್ದಲ್ಲ...
ಸೃಷ್ಟಿಯ ಮೂಲ ಹೆಣ್ಣು ಎಂಬ ನಗಾರಿ.
ಹೇಳುವೆನು ನಾ ವಿನಾಶಕೂ ಅವಳೇ ರಾಯಭಾರಿ
ಅವಳೆಂದರೇ ಅವಳೆಂದರೇ ಎಂದು ವರಿಸಿದ ಶಿಖರವ
ಪದಗಳ ಪೊಣಿಸಿ ಹಾಳೆಯ ತುಂಬಿಸಿದ ಕವಿ ಪುಂಗವ
ಗಂಡಿನ ಬದುಕಲಿ ತೊಟ್ಟು ಕುಣಿವಳು ಬಣ್ಣದ ಗೆಜ್ಜೆ.
ಅರಿಯಲಾರನು ದೇವರು ಕೂಡ ಅವರ ಮನಸ್ಸಿನ ಹೆಜ್ಜೆ.
ಪರಶುರಾಮ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ