ಅಮ್ಮ
ನನ್ನ ಮೊದಲ ಮಾತಿನ ಮಧುರ ಸ್ವರ ನೀನು
ನನ್ನ ಮೊದಲ ಹೆಜ್ಜೆಯ ಧೈರ್ಯ ನೀನು
ಬಿದ್ದಾಗ ಕೈ ಹಿಡಿದ ನೆರಳು ನೀನು
ಬಾಳಿನ ಬೆಳಕಾದ ದೀಪ ನೀನು
ರಾತ್ರಿಯಿಡೀ ನಿದ್ರೆ ಬಿಟ್ಟು ಕಾದವಳು
ನನ್ನ ನಗು ನೋಡಿದರೆ ಹರ್ಷ ಪಡುವವಳು
ನನ್ನ ಕಣ್ಣೀರನ್ನು ತೂಗಿ ಮುದ್ದು ಕೊಡುವವಳು
ತನ್ನ ನೋವನ್ನು ಮರೆತು ನನ್ನನ್ನು ಉಳಿಸುವವಳು
ನಿನ್ನ ಪ್ರೀತಿಗೆ ಮಳೆಯಿಲ್ಲ ಅಮ್ಮ
ನಿನ್ನ ತ್ಯಾಗಕ್ಕೆ ಬೆಲೆ ಇಲ್ಲ ಅಮ್ಮ
ನಿನ್ನ ಹೃದಯವೇ ನನ್ನ ದೇವಾಲಯ
ನಿನ್ನ ಆಶೀರ್ವಾದವೇ ನನ್ನ ಆಯುಧ
ಈ ಜೀವವಿದ್ದರೆ ನಿನಗಾಗಿ ಅಮ್ಮ
ನಿನ್ನ ನಗುವೇ ನನ್ನ ಸ್ವರ್ಗ ಅಮ್ಮ
ಶ್ರೀಷ್ಮ ಎಂ.ಬಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ