ಅನ್ ಎಜುಕೇಟೆಡ್ ಅಪ್ಪ-ಅಮ್ಮ ಪರೀಕ್ಷೆ ಎದುರಿಸುತ್ತಿದ್ದಾರೆ.
ಮಕ್ಕಳ ಪರೀಕ್ಷೆಗಾಗಿ ಅನ್ ಎಜುಕೇಟೆಡ್ ಅಪ್ಪ ಅಮ್ಮ ಪ್ರತಿನಿತ್ಯ ಪರೀಕ್ಷೆ ಎದುರಿಸುತ್ತಿದ್ದಾರೆ. ಪರೀಕ್ಷೆ ಹಾಲ್ ನಲ್ಲಿ ಮಕ್ಕಳು ಪೆನ್ ಪೇಪರ್ ಹಿಡಿದು ಪರೀಕ್ಷೆ ಎದುರಿಸುತ್ತಿದ್ದರೆ, ಹೊಲದಲ್ಲಿ ಕುಡುಗೋಲು ಪಿಖಾಶಿ ಹಿಡಿದು ಅಪ್ಪ ಅಮ್ಮ ಪರೀಕ್ಷೆ ಎದುರಿಸುತ್ತಿದ್ದಾರೆ. ಒಂದು ಕಡೆ ಪೆನ್ನಿನಲ್ಲಿರುವ ಇಂಕು ಬಿಳಿಯ ಪೇಪರ್‌ನಲ್ಲಿ ಬಿದ್ದರೆ, ಇನ್ನೊಂದು ಕಡೆ ಬೆವರ ಹನಿಗಳು ಭೂಮಿಯ ಮೇಲೆ ಬೀಳುತ್ತದೆ. ಒಂದು ಕಡೆ ನಿದ್ದೆಯನ್ನು ತ್ಯಾಗ ಮಾಡಿದರೆ, ಇನ್ನೊಂದು ಕಡೆ ಮುದ್ದೆಯನ್ನು ತ್ಯಾಗ ಮಾಡುತ್ತಾರೆ. ಸ್ಪರ್ಧಾತ್ಮಕ ಗದ್ದಲಿನಲ್ಲಿ ಹೋರಾಡುತ್ತಿರುವ ಮಕ್ಕಳು ಒಂದು ಕಡೆಯಾದರೆ, ಸ್ಪರ್ಧೆಗೆ ಇಳಿದ ಮಕ್ಕಳಿಗಾಗಿ ಗದ್ದೆಯಲ್ಲಿ ಇಳಿದು ಹೋರಾಡುತ್ತಿರುವ ಅಪ್ಪ-ಅಮ್ಮ ಇನ್ನೊಂದು ಕಡೆ, ಕನಸು ಒಂದೇ, ಆದರೆ ಆ ಕನಸನ್ನು ನನಸಾಗಿಸಲು ಹೋರಾಡುವವರು ಒಬ್ಬರಲ್ಲ.
ಕಂಡ ಕನಸನ್ನು ನನಸಾಗಿಸಲು ಸಾಕಷ್ಟು ತ್ಯಾಗ ಹಾಗೂ ಬಲಿದಾನವನ್ನು ನೀಡಬೇಕಾಗುತ್ತದೆ. ಸುಂದರ ಬದುಕನ್ನು ಕಟ್ಟಿಕೊಳ್ಳಲು ಕಠಿಣ ತಪಸ್ಸನ್ನು ಮಾಡಬೇಕಾಗುತ್ತದೆ. ಸುಖ ಸಾಗರವನ್ನು ತಲುಪಬೇಕಾದರೆ ಅಡೆತಡೆಗಳ ರೂಪದಲ್ಲಿ ಉಕ್ಕೇರಿ ಬರುವ ಅಲೆಗಳ ಸಮುದ್ರವನ್ನು ಈಜಬೇಕಾಗುತ್ತದೆ. ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಲು ನಮಗೆ ಆಗಾಧವಾದ ಶಕ್ತಿಯ ಅವಶ್ಯಕತೆ ಇರುತ್ತದೆ. ಹಾಗೂ ಆ ಶಕ್ತಿ ಕೇವಲ ತಂದೆ-ತಾಯಿ ಮಾತ್ರ ಆಗಿರುತ್ತಾರೆ.
ದಿವ್ಯಶ್ರೀ. ಎ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ