ಸೋಮವಾರ, ಏಪ್ರಿಲ್ 13, 2026

ಸಂಚಿಕೆ - ೧೬

ಬಸವಣ್ಣ

೧೨ನೇ ಶತಮಾನದ ಮಹಾ ಮಾನವ ಬಸವೇಶ್ವರ 

ಜನ್ಮಸ್ಥಳ ಬಸವನ ಬಾಗೇವಾಡಿಯ ಇಂಗಳೇಶ್ವರ 

ಮಾದರಸ ಮಾದಲಾಂಬಿಕೆಯರ ಮಗನಾಗಿ ಜನನ 

ಸಮಾಜದ ಜನರಲ್ಲಿ ಅರಿವು ಮೂಡಿಸಿತು ಇವರ ವಚನ


ಸ್ಥಾಪಿಸಿದರು ಅನುಭವ ಮಂಟಪವನ್ನು 

ಎಲ್ಲರಿಗೂ ತಿಳಿಸಿದರು ಶಿವ ಭಕ್ತಿಯ ಸಾರವನ್ನು 

ಪರಿಚಯಿಸಿದರು ಸ್ತ್ರೀ ಪುರುಷ ಸಮಾನತೆಯನ್ನು 

ವಚನದಲಿ ಹೇಳಿದರು ಮನ ಶುದ್ಧ ಮಹತ್ವವನ್ನು


ಸಮಾನತೆಯನ್ನು ಜಗಕ್ಕೆ ಸಾರಿದ ಹರಿಕಾರ 

ಜಗದ ಜ್ಯೋತಿ ಎಂದು ಹೆಸರಾದ ಕ್ರಾಂತಿವೀರ 

ಕಾಯಕವೇ ಕೈಲಾಸ ಎಂದು ಹೇಳಿದ ವಚನಕಾರ 

ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಹೋರಾಟಗಾರ


ದಿವ್ಯಶ್ರೀ. ಎ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...