ಸೋಮವಾರ, ಏಪ್ರಿಲ್ 13, 2026

ಸಂಚಿಕೆ - ೧೬

ಅಪ್ಪ

      ಅಪ್ಪ ಎಂದರೇ ನಮ್ಮೆಲ್ಲಾ ಕೋರಿಕೆಗಳನ್ನು ಈಡೆರಿಸುವವರು. ಪ್ರತಿಯೊಬ್ಬ ಮಕ್ಕಳ ಪಾಲಿಗೆ ಅಪ್ಪನೇ ಮೊದಲ ದೇವರು, ಕುಟುಂಬದ ಜವಬ್ದಾರಿಗಳು ಹೆಗಲ ಮೇಲೆ ಹೊತ್ತು, ಕಷ್ಟಗಳನ್ನು ನುಂಗಿ ಏನೇ ಕಷ್ಟವಿದ್ದರೂ ತಾನೊಬ್ಬನೇ ಅನುಭವಿಸಿ, ಮಕ್ಕಳು ಖುಷಿಯಾಗಿರಬೇಕು ಎಂದು ಹಂಬಲಿಸುವ ಜೀವ ಅವರದು. ನಮ್ಮ ಕನಸುಗಳನ್ನು ಸಾಧಿಸಲು ಅವರು ಸದಾ ಪ್ರೇರಣೆ ನೀಡುತ್ತಾರೆ ಮತ್ತು ಬೆಂಬಲವಾಗಿರುತ್ತಾರೆ. ಅಪ್ಪನ ಪ್ರೀತಿ ಬಹುಶಃ ಮಾತಿನಲ್ಲಿ ಕಾಣಿಸದಿರಬಹುದು. ಆದರೆ ಅವರ ಕಾರ್ಯಗಳಲ್ಲಿ ಅದು ಸ್ಪಷ್ಟವಾಗಿ ನಮಗೆ ಗೋಚರಿಸುತ್ತದೆ. ಅಪ್ಪ ನಮ್ಮ ಜೀವನದ ಆದರ್ಶ ವ್ಯಕ್ತಿ, ಅವರ ನಡೆ-ನುಡಿಗಳು ಪರಿಶ್ರಮ ಮತ್ತು ಹೊಣೆಗಾರಿಕೆ ನಮ್ಮನ್ನು ಪ್ರೇರೆಪಿಸುತ್ತದೆ. ಅವರಿಂದ ನಾವು ಧೈರ್ಯ, ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಪಡೆಯುತ್ತೇವೆ. ಆದ್ದರಿಂದ ನಾವು ಸದಾ ಅಪ್ಪನಿಗೆ ಗೌರವ ನೀಡಬೇಕು. ಮತ್ತು ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು.

ಪ್ರೇಮಾವತಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...