ಸೋಮವಾರ, ಏಪ್ರಿಲ್ 6, 2026

ಸಂಚಿಕೆ - ೧೫

ಮಂಜರಾಬದ ಕೋಟೆ

      ಇತ್ತೀಚಿನ ರಜೆ ದಿನಗಳಲ್ಲಿ ನಾನು ಬೇಟಿ ನೀಡಿದ ಪ್ರವಾಸಿ ಸ್ಥಳವೆಂದರೆ ಮಂಜರಾಬದ ಕೋಟೆ. ಈ ಸ್ಥಳವು ಹಾಸನ ಜಿಲ್ಲೆಯ ಸಕಲೇಶಪುರದಿಂದ ಮುಂದಕ್ಕೆ ೫ ಕಿ.ಮೀ. ದೂರದಲ್ಲಿರುವ ದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ.


ಕೋಟೆಯ ಹಿನ್ನಲೆ....

      ಮಂಜರಾಬದ ಕೋಟೆಯನ್ನು ಟಿಪ್ಪು ಸುಲ್ತಾನ ೧೭೮೫-೧೭೯೨ ರ ನಡುವೆ ನಿರ್ಮಿಸಿದನು ಎಂದು ಹೇಳಲಾಗುತ್ತದೆ. ಮೊದಲ ಹಂತದಲ್ಲಿ ಸುಮಾರು ೧೨ ಅಡಿಗಳೆತ್ತರದ ಗೋಡೆಯನ್ನು ಕಲ್ಲಿನಿಂದ ನಿರ್ಮಿಸಿದ್ದಾರೆ.ಈ ಕೋಟೆಯನ್ನು ಕಲ್ಲು ಮತ್ತು ಇಟ್ಟಿಗೆಯಿಂದ ಎರಡು ಹಂತಗಳಲ್ಲಿ ನಿರ್ಮಿಸಲಾಗಿದೆ. ಈ ಕೋಟೆಯನ್ನು ಆಂಗ್ಲ ಮೈಸೂರು ಯುದ್ಧದಲ್ಲಿ ಈ ಕೋಟೆಯಲ್ಲಿ ಬಳಸಲಾಗಿದೆ ಎನ್ನಲಾಗುತ್ತದೆ. ಶ್ರೀರಂಗಪಟ್ಟಣದ ಪತನದ ನಂತರ ಬ್ರಟೀಷರು ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ನಂತರ ಅದರ ಕೆಲವು ಭಾಗಗಳನ್ನು ನಾಶಮಾಡಿದರೆನ್ನಲಾಗಿದೆ.


ಕೋಟೆಯ ವಿನ್ಯಾಸ...

      ಸುಮಾರು ಈ ಕೋಟೆಯು ಎಂಟು ಕೋನದ ಸಕ್ಷತ್ರಾಕಾರದಲ್ಲಿ ನಿರ್ಮಿಸಲಾಗಿದ್ದು. ಇದನ್ನು ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಕೋಟೆಯ ಒಳಗಡೆ ನೀರಿನ ಕೊಳ, ಮದ್ದುಗುಂಡು ಸಂಗ್ರಹಿಸುವ ಜಾಗವನ್ನು ಕಾಣಬಹುದು. ಮಳೆಗಾಲದಲ್ಲಿ ಒಂದು ರೀತಿ ಕಾಣುವ ಈ ಕೋಟೆ. ಮಳೆ ಇಲ್ಲದಿದ್ದಾಗ ಬೇರೆಯದೆ ರೀತಿ ಕಾಣುತ್ತದೆ. ಇಲ್ಲಿಗೆ ಒಂದು ಎತ್ತರದ ತಾಣದಲ್ಲಿ ನಿಂತು ಹಸಿರ ಸಿರಿಯನ್ನು ಕಣ್ಣುಂಬಿಕೊಳ್ಳಬಹುದು.ಈ ಕೋಟೆಯಲ್ಲಿ ಹಲವಾರು ಸುರಂಗ ಮಾರ್ಗಗಳು ಇವೆಯೆಂದು ಹೇಳಲಾಗುತ್ತದೆ. ಹಾಗೆ ಅವು ಶ್ರೀರಂಗಪಟ್ಟಣದವರೆಗೆ ತಲುಪಿಸುತ್ತದೆ ಎಂದು ಹೇಳಲಾಗುತ್ತದೆ.

ತ್ರಿವೇಣಿ.ವಿ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...