ಹುಚ್ಚು ಮನಸು
ನಿನ್ನ ಕಣ್ಣ ನೋಟದಲ್ಲೇ
ನೂರು ಆಸೆ ತುಂಬಿದೆ
ಇಲ್ಲ - ಸಲ್ಲದ ಆಸೆ ತುಂಬಿ
ಈ ಹುಚ್ಚು ಮನಸು ಕುಣಿದಿದೆ.
ನಿನ್ನ ನಾನು ನೋಡಿದಾಗಲೇ
ಈ ಹೃದಯ ತುಂಬಿ ಹಾಡಿದೆ
ಕುಣಿದು - ನಲಿದು - ನೆನೆದು
ಈ ನನ್ನ ಹುಚ್ಚು ಮನಸು ಮಾಗಿದೆ
ನೂರು ಮುಖವ ನೋಡಿದರೂ
ನಿನ್ನ ಮುಖದಲೆನೋ ಹೊಳಪಿದೆ
ನಿನ್ನ ಬಯಸಿ - ಅರಸಿ
ಈ ಹುಚ್ಚು ಮನಸು ಪ್ರೇಮ ಗೀತೆ ಹಾಡಿದೆ
ಶರಣಬಸವ ನಾಯಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ