ಭಾರತಾಂಬೆಯಲ್ಲಿ ಬಿನ್ನಹ
೧೬ ॥ ಭಾರತಾಂಬೆ ನೀ ನೀಡಿದ ಬಿಕ್ಷೆಯೇ ನಮ್ಮಿ ಜೀವನ
ಕೊರಳನ್ನು ಅರ್ಪಿಸಿದರು ತೀರದು ನಿನ್ನ ಋಣ
ಕರ ಮುಗಿದು ಬೇಡುವೆನ್ನಮ್ಮನ್ನಲಹಿದ ನಿನ್ನ
ದೌರ‍್ಜನ್ಯ ಮಾಡಿದ ನಮ್ಮನ್ನು ಕ್ಷಮಿಸು ತಾಯೆ ನೀನು ॥ ೦೧ ॥
ನಿನ್ನ ಉದರವ ನರಸಿಂಹನಂತೆ ಸೀಳಿದೆವು
ನಿನ್ನಯ ಗರ್ಭದಲ್ಲುಟ್ಟಿದ ಮಕ್ಕಳನ್ನು ಕೊಂದೆವು
ನಾನು ಕೊಂದಿರುವುದು ನಮ್ಮಯ ಕುಟುಂಬದವರು
ಎನ್ನರಿವಿಲ್ಲದೆ ನಾಶ ಮಾಡಿರುವೆ ನಿನ್ನಸಿರಾ ॥ ೦೨ ॥
ನಿಮ್ಮಯ ಮಕ್ಕಳನ್ನರುಣಿಸದೆ ಸಾಯಿಸಿರುವ
ನಮ್ಮನ್ನೀನು ಪ್ರೀತಿಯ ಮಕ್ಕಳೆಂದೇ ತಿಳಿದಿರುವೆ
ಮಮತೆಯನ್ತುಂಬಿದಕ್ಕರೆಯ ತಾಯಿಯೇ ನೀನಾಗಿ
ನಮ್ಮಪ್ಪನ್ನು ಕ್ಷಮಿಸಿದೆ ನೀ ಕರುಣಮಯಿಯಾಗಿ ॥ ೦೩ ॥
ನಿನ್ನಯ ಕೋಪದ ಅರಿವು ನಮಗೆ ಅರಿಯದೆ
ನಿನ್ನ ಮುದ್ದಿನ ಮಕ್ಕಳಂತೆ ನಮ್ಮನ್ನು ಸಲುಹಿದೆ
ನಿನಗೆ ಸದಾ ಚಿರಋಣಿಯಾಗಿರುವೆವು ತಾಯೆ
ನಿನ್ನ ಕೋಪಾಗ್ನಿಯಲ್ಲಿಯೂ ನಮ್ಮನ್ನು ಕ್ಷಮಿಸು ತಾಯೆ ॥ ೧೪ ॥
ಪವಮಾನ ವರ್ಣನೆಯಲ್ಲಿ ಕಟ್ಟಲಾಗದವಳಾ
ಕವಿಗಳು ಶ್ರಮಿಸಿದರ್ನಿನ್ನ ಪದಗಳಲ್ಕಟ್ಟಲ್
ಅವರು ಕಂಗಾಲಾದರು ಪದಗಳೇ ಸಿಗದ
ಣುವಿನಲ್ಲೇ ಕಟ್ಟಿದೆವೆಂದು ಬೀಗಿದನು ಕವಿಂದ್ರ ॥ ೦೫ ॥
ವರ್ಣನೆಗೆ ಸಿಲುಕದವಳನ್ಯಾವ ಪದಗಳಲ್
ವರ್ಣಿಸಲಿ ಅವಳ ರೂಪವಂತಿಕೆಯನ್ನೋಡಿದ
ಕರ್ಣ ಪಿತನೆ ನಿತ್ಯಾರತಿ ಎತ್ತುತ್ತಿರುವನವಳ್
ವರ್ಣಾಭಿಷೇಕವನ್ನೇಘರಾಜನು ನಿತ್ಯ ಮಾಡಿದ ॥ ೧೬ ॥
ನಿನ್ನ ಪಾದವನ್ನಮುದ್ರ ರಾಜನ್ನೊಳೆಯುತ್ತಿರುವನ್
ನಿನಗೆ ವಾಯುದೇವ ಪುಷ್ಪಾರ್ಚನೆ ಮಾಡುತ್ತಿರುವನ್
ನಿನ್ನ ದೃಷ್ಟಿಯನ್ನೆಗೆಯಲೆಂದೇ ಇರುವನ್ವಂದಿರನ್
ನಾನಿನ್ನೂ ಹುಳುಮಾನವ ನಿಂಗೆ ನಾನೇನು ಮಾಡಿಯೆನ್ ॥ ೦೭ ॥
ನಮ್ಮ ತಾಯಿ ಭಾರತಾಂಬೆಯೆ ನಿಂಗೆ ವಂದಿಸುವೆನು
ಅಮ್ಮನಂತೆ ಪಾಲಿಸಿ ಪೋಷಿಸಿ ರಕ್ಷಿಸಿದೆ ನೀನು
ಒಮ್ಮೆಯೂ ಸಿಡಿಲೇಳಲಿಲ್ಲ ಅತಿ ಕೋಪದಲ್ಲಿನೂ
ನಿಮ್ಮ ಪ್ರೀತಿ ಹೀಗೆಯೇ ರಕ್ಷಿಸಲೆಂದು ಬೇಡುವೆನು ॥ ೦೮ ॥
(ಸೂಚನೆ : ಈ ಕಾವ್ಯವೂ ಅಕ್ಷರಸಮವೃತ್ತ ಕಾವ್ಯವಾಗಿದೆ. ಈ ಕಾವ್ಯದ ಪ್ರತಿಯೊಂದು ಚರಣವೂ ೧೬ ಅಕ್ಷರಗಳನ್ನು ಒಳಗೊಂಡಿದೆ.)
ಎಸ್.ಎಸ್.ಎ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ