“ಯುದ್ಧ ಅಲ್ಲಿ.... ಪರಿಣಾಮ ಇಲ್ಲಿ”
ನನ್ನ ಹೆಸರು ಜಗದೀಶ್ ನನ್ನ ಗೆಳೆಯರಾದ ಮಹೇಶ್ ಮತ್ತು ಮರಿಸಿದ್ದಪ್ಪ, ನಾವು ಮೂವರು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು. ನಾವು ಬಳ್ಳಾರಿ ಕಡೆಯಿಂದ ಬಂದವರು. ಈಗ ಎಂ.ಎ. ಅಂತಿಮ ಹಂತದಲ್ಲಿ ಇದ್ದು ಹಾಸ್ಟೆಲ್ನಲ್ಲಿ ನೆಲೆಸಿದ್ದೇವೆ. ಹಾಸ್ಟೆಲ್ನಲ್ಲಿ ನಮ್ಮ ಕೊಠಡಿಗಳು ಬೇರೆ ಬೇರೆ ಇದ್ದರು ನಮ್ಮಲ್ಲಿ ಒಟ್ಟಾಗಿ ಮಾತುಕತೆಗಳು ನಡೆಯುವುದು ಸರ್ವೇಸಾಮಾನ್ಯವಾಗಿದೆ. ಇಂದು ಬೆಳಿಗ್ಗೆ ಊಟಕ್ಕೆ ಎಂದು ಮಹೇಶ್ ನನ್ನನ್ನು ಕರೆಯಲು ಬಂದಾಗ. ಈ ಪ್ರಸ್ತುತ ದಿನಮಾನಗಳಲ್ಲಿ ನಡೆಯುವ ಯುದ್ಧದ ಕುರಿತು ನಮ್ಮ ಸಂಭಾಷಣೆ ಈ ಮುಂದಿನಂತೆ ನಡೆಯಿತು.
ಮಹೇಶ್ : ಏನು ಅಣ್ಣ ಏನು ಮಾಡುತ್ತಿದ್ದೀಯ.
ಜಗದೀಶ್: ಏನು ಇಲ್ಲ ಇವತ್ತು ಭಾನುವಾರ ರಜೆ ಅಲ್ವಾ ಅದಕ್ಕೆ ಬಟ್ಟೆ ಒಗೆಯಲು ಸಿದ್ಧತೆ ಮಾಡುತ್ತಿದ್ದೀನಿ.
ಮಹೇಶ್ : ಸರಿ, ಅದು ಇರಲಿ ಟಿಫಿನ್ ಆಯಿತಾ.
ಜಗದೀಶ್: ಇಲ್ಲ ಹೋಗಬೇಕು ಕಣೋ.
ಮಹೇಶ್ : ಬಾ ಮತ್ತೆ ಹೋಗೋಣ. ನಾನು ಇನ್ನೂ ಮಾಡಿಲ್ಲ. (ಅವನು ನನ್ನನ್ನು ಕರೆಯಲು ತಟ್ಟೆ ಸಮೇತಾ ಬಂದಿದ್ದನು.)
ಜಗದೀಶ್: ಇವತ್ತು ಏನು ಸ್ಪೆಷಲ್. ಇವತ್ತು ಭಾನುವಾರ ಅಂದರೆ ದೋಸೆ ಇರಬಹುದು ಅಲ್ವಾ.
ಮಹೇಶ್ : ಅಲ್ಲಿ ಎಲ್ಲಿ ದೋಸೆ ಪಾ.....
ಜಗದೀಶ್: ಯಾಕೆ ಇವತ್ತು ದೋಸೆ ಮಾಡಿಲ್ವಾ?
ಮಹೇಶ್ : ಹೋಗಾ ನಿನ್ ಆಳೆ ನಾಡ, ಯಾವ್ ದೋಸೆ, ಯಾವ್ ಇಡ್ಲಿ, ಅವ್ನೌನ್ನ,
ಜಗದೀಶ್: ಯಾಕ್ಲಾ ಬೆಳೆ ಬೆಳಿಗ್ಗೆ ಮೆಣಸಿನಕಾಯಿ ತರ ಉರಿಯುತ್ತಿದ್ದೀಯ ಅಂಥದು ಏನಾಯಿತ್ಲಾ.
ಮಹೇಶ್ : ಗೊತ್ತಿಲ್ವೆನ್ಹಾ ನಿಂಗೆ ಅಲ್ಲಿ ಯಾವನ್ಯವನೋ ಬಡೆದಾಡಿಕೊಂಡು ಸಾಯಕತ್ತರಂತೆ. ಅದಕ್ಕೆ ಆ ಸೊಳೆಮಕ್ಕಳು ಸಾಯೋದ್ ಅಲ್ದೆ ಇಲ್ಲಿ ನಮ್ಮನ್ ಕುಡಾ ಸಾಯಿಸುತ್ತಿದ್ದಾರೆ.
ಜಗದೀಶ್: ಎದುಕ್ಲಾ ನಿಮ್ ಊರಾಗ ಅಂಥದು ಏನಾಯಿತು.
ಮಹೇಶ್ : ನಮ್ಮೂರಗಲ್ಲೋ ಮಾರಾಯ. ನಮ್ಮೂರಾಗ ಬರೆ ಕೊತ್ತುಂಬರಿ ಜಗಳಗಳು, ಅದೇನ್ ದೊಡ್ಡ ಸಮಸ್ಯೆ ಅಲ್ಲ. ನಮ್ಮೂರಾಗ ಯಾವನಾದ್ರು ಸಾಯಲಿ ನಮ್ಮೊರ್ದು ಇದ್ದಿದ್ದೆ.
ಜಗದೀಶ್: ಮತ್ತೆ ಎಲ್ಲಿ ಸಾಯಕತ್ತರ್ಲೆ ಬಿಡಿಸಿ ಹೇಳು ಲೇ.
ಮಹೇಶ್ : ಇಡೀ ಪ್ರಪಂಚಕ್ಕೆ ಗೊತ್ತಿದೆ ನಿಂಗೆ ಗೊತ್ತಿಲ್ಲ.
ಜಗದೀಶ್: ಹೋ ಆ ಯುದ್ಧನ ಅಲ್ಲಿ ಯಾವನನ್ನ ಬಡಿದುಕೊಂಡು ಸಾಯಲಿ ಅದಕ್ಕೂ ನಮಗೂ ಎಂತ ಸಂಬಂಧ ಲೇ.
ಮಹೇಶ್ : ಸಂಬಂಧ ಇದೆ ಲೇ ಸಂಬಂಧ ಇದೆ. ಅಲ್ಲಿಂದ ಕಣಪ್ಪ ಗ್ಯಾಸ್ ಸಿಲಿಂಡರ್ ಬರೋದು. ನಿಮ್ ಪಕ್ಕದ ಮನೆ ಆಂಟಿ ಮನೆಯಿಂದಲ್ಲ.
ಜಗದೀಶ್: ಯಾಕೆ ನಮ್ ಕಡೆಯಲ್ಲಿ ಸಿಗಲ್ವ, ಅಷ್ಟು ದೂರದಿಂದ ತರೋ ಅವಶ್ಯಕತೆ ಏನಿದೆ.
ಮಹೇಶ್ : ನಮ್ ಕಡೆ ಎಲ್ಲಿ ಸಿಗುತ್ತೆ ಲೇ, ಗ್ಯಾಸ್ ಏನು ಸಿದ್ದರಾಮಯ್ಯ ಗ್ಯಾರಂಟಿ ಕೊಡುತಿನಿ ಅಂತ ಹೇಳಿದ್ದಾನ.
ಜಗದೀಶ್: ಅಲ್ಲ ಲೇ ಐದು ಗ್ಯಾರಂಟಿಗಳನ್ನು ಕೊಟ್ಟನಾ ಒಂದು ಗ್ಯಾಸ್ ಕೊಡೋಕೆ ಆಗೋಲ್ವ
ಮಹೇಶ್: ಗ್ಯಾಸ್ ಕೊಡೋಲ್ಲ ಅಣ್ಣ. ಅವರು ಗ್ಯಾಸ್ ಕೊಡೋಲ್ಲ. ಬೇಕಿದ್ರೆ ತಿಂದು ಗ್ಯಾಸ್ ಬಿಡುತ್ತಾನೆ ನೋಡು ತುಂಬಿಕೊಂಡು ಹೋಗುತಿಯ ನೋಡು.
ಜಗದೀಶ್: (ನಗುತ್ತಾ) ಬೇಡ ಪಾ ಬೇಡಾ. ಅವನ ಗ್ಯಾಸ್ ಬೇಡ, ಅವನ ಗ್ಯಾರಂಟಿನು ಬೇಡಾ. ಇವಾಗ ನಿಂಗೆ ಏನು ಸಮಸ್ಯೆ
ಮಹೇಶ್ : ನನಗೆ ದೇಶದಲ್ಲಿ ನಡೆಯೋ ಯುದ್ಧಗಳೇ ದೊಡ್ಡ ಸಮಸ್ಯೆ ಆಗಿಬಿಟ್ಟಿದೆ.
ಜಗದೀಶ್: ಹೋ ಇದೊಂಥರಾ ಬಟ್ಟರ್ ಪ್ರೈ ಎಫೆಕ್ಸ್ ನಾ.
ಮಹೇಶ್ : ಹೂ ಅದೇ ರೀತಿ ನೋಡು ಅಲ್ಲಿ ಯುದ್ಧ ಮಾಡಿ ಸಾಯಕತ್ತಾರ. ಅದರ ಪ್ರಭಾವ ಇಲ್ಲಿ ನಮಗೆ ಆಗುತ್ತಿದೆ.
ಜಗದೀಶ್: ಇದಕ್ಕೆ ತಕ್ಕಂತೆ ನಮ್ ಕಡೆ ಒಂದು ಗಾದೆ ಮಾತು ಇದೆ ಹೇಳಾ.
ಮಹೇಶ್ : ಇಲ್ಲಿ ನಮಗೆ ಹೊಟ್ಟೆಗೆ ಹಿಟ್ಟು ಇಲ್ಲ ಅಂದ್ರೆ, ನಿಂದೊಂದು ಗಾಳಿಗೊಗೋ ಗಾದೆ ಮಾತು ಅಂತೆ. ಹೇಳಪ್ಪ ಅದು ಎಂಥದು.
ಜಗದೀಶ್: ಗಂಡ ಹೆಂಡತಿ ಜಗಳದಾಗ ಕೂಸು ಬಡವಾಯಿತು ಅಂತೆ ಹಾಗೆ ಆಯಿತು ನೋಡು ನಮ್ ಪರಿಸ್ಥಿತಿ.
ಮಹೇಶ್ : ಕೂಸು ಬಡವಾಯಿತೋ ಗೊತ್ತಿಲ್ಲ. ಆದರೆ ನಾನು ಅಂತು ಬಡಕಲು ಅದೇ ನೋಡು.
ಜಗದೀಶ್: ಮತ್ತೆ ಇವಾಗ ಅಡುಗೆ ಹೇಗೆ ಮಾಡುತ್ತಿದ್ದಾರೆ.
ಮಹೇಶ್ : ಇದೇ ಅಲ್ಲ ಪಾ ಹಳೆ ಕಾಲದ ಪದ್ಧತಿ ಸೌದೆ ಹೊಲೆಯಲ್ಲಿ ಮಾಡುತ್ತಿದ್ದಾರೆ.
ಜಗದೀಶ್: ಹಳೆ ಕಾಲದ ಪದ್ದತಿ ಮತ್ತೆ ಬಂತ ಹಾಗಿದ್ರೆ, ಊಟ ರುಚಿ ಇರಬೇಕು ಅಲ್ವಾ, ಸೌದೆ ಅಡುಗೆಯಲ್ಲಿ ಮಡಿದ್ದು ಬಲು ರುಚಿನೆ ತಾನೆ.
ಮಹೇಶ್ : ರುಚಿ ಅಂತಾರೆ ಅಷ್ಟೇ ಅದು ಆಗಿನ ಕಾಲಕ್ಕೆ ಮಾತ್ರ. ಈ ಹಾಸ್ಟೆಲ್ ಊಟದಲ್ಲಿ ಅಲ್ಲ.
ಜಗದೀಶ್: ಆಗಿದ್ರೆ ಇವಗ ಹಾಸ್ಟೆಲ್ನಲ್ಲಿ ಏನೇನು ಅಡುಗೆ ಮಾಡುತ್ತಿದ್ದಾರೆ.
ಮಹೇಶ್ : ಅನ್ನ, ಸಾಂಬಾರ್ ಬಿಟ್ಟು ಏನು ಇಲ್ಲ. ನೀನು ಆಸೆ ಪಟ್ಟಂತೆ ಇಡ್ಲಿ, ದೋಸೆ, ಚಪಾತಿ ಇವೆಲ್ಲ ತೆಗೆದು ಬಿಟ್ಟರೆ ನೋಡು.
ಜಗದೀಶ್: ಅಯ್ಯೋ! ಊರಲ್ಲಿ ರುಚಿ ರುಚಿ ಊಟ ಮಾಡಿ ಬಂದವರು ಇಲ್ಲಿ ಸಪ್ಪೆ ತಿಂದು ಸಾಕಾಗಿತ್ತು. ಏನೋ ಪ್ರತಿ ದಿನ ಬೆಳಿಗ್ಗೆ ವಿಭಿನ್ನ ವಿಭಿನ್ನ ಉಪಾಹಾರ ಸಿಗುತ್ತದೆ ಎಂದು ಕುಷಿ ಪಡುತ್ತಿದ್ದೆ. ಇವಾಗ ಅದಕ್ಕೂ ಕಡಿವಾಣ ಹಾಕಿದ್ದಾರೆ ನಾ. ಈ ಸಮಯದಲ್ಲಿ ಮರಿಸಿದ್ದ ಊರಿಗೆ ಹೋಗಿದ್ದೆ ಒಳ್ಳೆಯದಾಯಿತು ಬಿಡು. ಇಷ್ಟೇನಾ ಇನ್ನೇನಾದರೂ ತೆಗೆದಿದ್ದಾರಾ.
ಮಹೇಶ್ : ಅಷ್ಟೇ ಅಲ್ಲ ಪಾ! ವಡೆ, ಮಿರ್ಚಿ, ಹಪ್ಪಳ, ಸೊಂಡಿಗೆಯಂತಹ ಎಣ್ಣೆಯಲ್ಲಿ ಕರೆದು ಮಾಡೋದೆಲ್ಲಾ ತೆಗೆದುಬಿಟ್ಟಿದ್ದಾರೆ.
ಜಗದೀಶ್: ಒಳ್ಳೆಯದೇ ಆಯಿತು ಬೀಡು. ಈ ಹಾಳು ಎಣ್ಣೆ ಊಟ ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು. ಇರೋದ್ರಲ್ಲಿ ಹಾಲು, ಮೊಸರು, ಅನ್ನ ಊಟ ಮಾಡಿ ನೆಮ್ಮದಿಯಾಗಿ ಇರೋಣ.
ಮಹೇಶ್ : ಎಷ್ಟು ದಿನ ಅಂತ ತಿನ್ನಬೇಕು ಲೇ. ಇಂತ ಊಟ ನಾ.
ಜಗದೀಶ್ : ಆಗಾದ್ರೆ ಸಿಲಿಂಡರ್ ಬರುವವರೆಗೂ ನಮಗೆ ಇದೇ ಗತಿ ನಾ. ಅಲ್ಲಲೇ ನಮ್ ಊರ್ ಕಡೆ ಕಟ್ಟಿಗೆ ಸಿಗುತ್ತೆ ಅದರಲ್ಲೇ ಅಡುಗೆ ಮಾಡಿಕೊಂಡು ಬದುಕುತ್ತಾರೆ. ಈ ನಗರ ಪ್ರದೇಶದಲ್ಲಿ ಹೇಗೆ ಆಡುಗೆ ಮಾಡುತ್ತಾರೆ.
ಮಹೇಶ್ : ಇದೆ ಅಲ್ಲ ಕರೆಂಟ್ನಲ್ಲಿ ಅಡುಗೆ ಮಾಡೋ ಮಿಷನ್ ಅದರಲ್ಲಿ ಮಾಡಿಕೊಳ್ಳುತ್ತಾರೆ.
ಜಗದೀಶ್: ಅದಕ್ಕೂ ಕರೆಂಟ್ ಬಿಲ್ ಅಂತ ಇದೆ ಅಲ್ವಾ. ಅದೂ ಇರಲಿ ಸಿಲಿಂಡರ್ ಇಲ್ಲದೆ ಏನೇನು ಸಮಸ್ಯೆ ಆಗಿದೆ.
ಮಹೇಶ್ : ಅಣ್ಣ... ಒಂದೊಂದು ಅಲ್ಲಣ್ಣಾ. ಈ ನನ್ ಮಕ್ಕಳು ಮಾಡೋ ಅಲ್ಕಾ ಕೆಲಸಕ್ಕೆ ನಮ್ ಬುಡಕ್ಕೆ ಬಂತು. ಎಷ್ಟೋ ಜನರ ಊಟಕ್ಕೆ ಗ್ಯಾಸ್ ಇಲ್ಲದೆ ಪರದಾಡುತ್ತಿದ್ದಾರೆ. ಈಗಾಗಲೇ ಸಾರ್ವಜನಿಕ ಹೋಟೆಲ್ಗಳು ಮುಚ್ಚೊಗಿವೆ. ಹಾಸ್ಟೆಲ್ ಊಟ ಸೀಮಿತಗೊಂಡಿದೆ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವಂಥ (ಹುಡುಗಿಯರಿಗೆ ಪ್ರಿಯವಾದ) ಗೋಲ್ಗೊಪ್ಪ, ಗೋಬಿ ಮಂಚೂರಿ, ಎಗ್ ರೈಸ್ ಅಂಗಡಿಯಲ್ಲ ಮುಚ್ಚೊಗಿವೆ. ಅದರಿಂದ ಬೀದಿಗೆ ಬರೋ ಹುಡುಗಿಯರು ಕೂಡ ಕಾಣಿಸ್ತಿಲ್ಲ. ನಮ್ ಹುಡುಗಿ ಮೀಟ್ ಮಾಡಿ ಎಷ್ಟೋ ದಿನಗಳು ಆಯಿತು. ಈ ನನ್ ಮಕ್ಳು ಬಡ್ಡಾಡಿಕೊಂಡು ಸಾಯೋದ್ರಿಂದ.
ಜಗದೀಶ್: ಅಲ್ಲೋ ಇವಗಾ ನಿನ್ನ ಕಾಳಜಿ ಎಗ್ ರೈಸ್ ಅಂಗಡಿಯವರ ಮೇಲೋ, ಇಲ್ಲ ಹಾಸ್ಟೆಲ್ ಹುಡುಗಿಯರ ಮೇಲೋ.
ಮಹೇಶ್ : ಅಲ್ಲೋ ಅಣ್ಣಾ ಬೀದಿ ಅಂಗಡಿಯವರು ಬದುಕಬೇಕು ಅಂತ ಕಣೋ ನನ್ ಕಾಳಜಿ, ಅದಕ್ಕಾಗಿ ದಿನ ನಮ್ ಹುಡುಗಿ ಕೂಡ ವ್ಯಾಪಾರ ಮಾಡಿಸುತಿದ್ದೆ. ಅವರು ಬದುಕಬೇಕು ನಾವು ಬದುಕಬೇಕು.
ಜಗದೀಶ್: ಗೊತ್ತು ಬಿಡೋ ನಿಂದು ಅನೂಪ್ದು ರೆಗ್ಯುಲರ್ ಡ್ಯೂಟಿ ಜಿ.ಟಿ. ಹತ್ತಿರ ಅಂತ.
ಮಹೇಶ್ : ಅವಗ ಇತ್ತು ಡ್ಯೂಟಿ ಬ್ಯೂಟಿ ಇವಾಗ ಅದಕ್ಕೂ ಬಿತ್ತಲ್ಲಪ್ಪ ಚಾಟಿ.
ಜಗದೀಶ್: ಆಗದೇ ಇನ್ಮುಂದೆ ಎಂಗ್ಲಾ ನಿಮ್ ಬ್ಯೂಟಿ ಜೊತೆ ಡ್ಯೂಟಿ.?
ಮಹೇಶ್ : ನಮ್ ಪಾಟ್ನಾರ್ ಅನೂಪ್ ಪರಾರಿಯಾದ. ಇನ್ನೂ ನಮ್ ಅಧ್ಯಕ್ಷ(ಶ್ರೇಯಸ್)ರಂತೂ "ಪುಷ್ಪಾ ಜೀವನದಲ್ಲಿ ಮುಂದೆ ಬಾ, ಸಂಪಾದನೆ ಮಾಡು. ಇಂತ ಹುಡುಗಿಯರು ನಿನ್ ಹಿಂದೆ ಕ್ಯೂ ಕ್ಯೂ ನಿಂತುಕೊಳ್ಳುತ್ತಾರೆ" ಅಂತ ಹೇಳಿ ಹೇಳಿ ಸಯಾಕತ್ತಾನೆ. ಈಗಂತೂ ನಮ್ಮಾ ಮುಸಿಕೂಡ ನೋಡ್ತಾಯಿಲ್ಲ. ನಾನೊಬ್ನೆ ಇಲ್ಲಿ ಪರದೇಶಿಯಾಗಿದ್ದೇನೆ. ಯುದ್ಧ ನಿಂತೇನೆ ಅಣ್ಣಾ ನಮ್ ಬ್ಯೂಟಿ ಜೊತೆ ಡ್ಯುಟಿ ಸ್ಟಾರ್ಟ್ ಆಗೋದು.
ಜಗದೀಶ್: ಅಲ್ಲ ಈ ಯುದ್ಧ ಎಲ್ಲಾ ಯಾಕೆ ಬೇಕು ಇವರಿಗೆ. ಜಗಳ ಮಾಡೋದ್ರಿಂದ ಪಡೆದುಕೊಳ್ಳುವುದಕಿಂತ ಕಳೆದುಕೊಳ್ಳುವುದೇ ಹೆಚ್ಚು. ಇಂತ ಯುದ್ಧ ಯಾಕೇ ಬೇಕು. ಇತಿಹಾಸ ಗೊತ್ತಿಲ್ವ ಆ ಅಶೋಕ ಚಕ್ರವರ್ತಿನೆ ಕಳಿಂಗ ಯುದ್ಧದ ಪರಿಣಾಮದಿಂದ ಧರ್ಮ ಮಾರ್ಗವಿಡಿದು ತನ್ನ ಶ್ರೇಷ್ಠತೆ ಹೆಚ್ಚಿಸಿಕೊಂಡ.
ಮಹೇಶ್ : ಇತಿಹಾಸನು ಗೊತ್ತು ಇಡ್ಲಿ ದೋಸೆನು ಗೊತ್ತು. ನಿನ್ನದು ಭಾರತೀಯ ಸಂಸ್ಕೃತಿ ಅದಕ್ಕೆ ನೀನು ಅಶೋಕ ಯುದ್ಧ ಬಿಟ್ಟು ಬುದ್ಧನಾದ ಅಂತ ಹೇಳುತ್ತೀಯ. ಆದರೆ ಅವರ ದೇಶ ಸಂಸ್ಕೃತಿನೇ ಬೇರೆ ಅದಕ್ಕೆ ಅವರು ಹಿಟ್ಲರ್. ಮೋಸೋಲಿನಿ, ಅಲೆಕ್ಸಾಂಡರ್, ನೆಪೋಲಿಯನ್, ಘಜ್ಜಿಯಂತವರ ಆಲೋಚನೆಗಳನ್ನೇ ಪಾಲಿಸುತ್ತಿರೋದ್ರಿಂದಲೇ ಈ ರಾಷ್ಟ್ರ ರಾಷ್ಟ್ರಗಳ ಮಧ್ಯೆ ಯುದ್ಧ ನಡೆಯುತ್ತಿರೋದು.
ಜಗದೀಶ್: ಹೂ ಹೌದು ಇವೆಲ್ಲ ಯೋಚನೆ ಮಾಡೋ ವಿಚಾರಗಳೇ, ಒಬ್ಬ ವ್ಯಕ್ತಿಯ ಆಲೋಚನೆಗಳು ಚೆನ್ನಾಗಿ ಇದ್ರೆ ಒಂದು ರಾಷ್ಟ್ರವೇ ಚೆನ್ನಾಗಿ ಇರುತ್ತೆ ಅದಕ್ಕೆ ನಮ್ ದೊಡ್ಡವರು ಹೇಳಿಲ್ವ "ನಾಲಿಗೆ ಚೆನ್ನಾಗಿ ಇದ್ದರೆ ನಾಡು ಚೆಂದ” ಅಂತ. ಮೊದಲು ನಾವು ಚೆನ್ನಾಗಿ ಇರಬೇಕು ಅಮೇಲೆ ನಮ್ಮವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯುದ್ಧ ಮಾಡಿದವರೆಲ್ಲ ಮಣ್ಣಲ್ಲಿ ಮಣ್ಣಾಗಿ ಹೋದರು ಇವರಿಗೆ ಇನ್ನೂ ಬುದ್ದಿ ಬಂದಿಲ್ಲ. ಅಕ್ಷರಸ್ಥರೆ ಅನಕ್ಷರಸ್ಥರಂತೆ ವರ್ತಿಸುತ್ತಿದ್ದಾರೆ. ಅನಕ್ಷರಸ್ಥರೇ ಬುದ್ಧಿ ಜೀವಿಗಳಗಿದ್ದಾರೆ.
ಮಹೇಶ್ : ಅಕ್ಷರಸ್ಥರೆ ಆಯುಧ ಹಿಡಿದರೆ. ಇನ್ನೂ ಅನಕ್ಷರಸ್ಥರ ಗತಿ ಏನಣ್ಣ. ಇನ್ನೂ ಏನೇನೋ ನೋಡೋಕು ಈ ಕಣ್ಣಿಂದ. ನನಗಂತು ಇವಾಗಿವಾಗ ಸರಿಯಾಗಿ ನಿದ್ದೆನೆ ಬರ್ತಿಲ್ಲ ಭಯದ ವಾತಾವರಣದಲ್ಲಿ ಬದುಕುತ್ತಿದ್ದೇನೆ. ತಲೆ ಮೇಲೆ ವಿಮಾನ ಹಾರಿದರು ಭಯ ಆಗುತ್ತೆ. ಪಕ್ಕದಲ್ಲಿ ಪಟಾಕಿ ಬಿಟ್ಟರು ನಡುಕ ಉಂಟಾಗುತ್ತೆ. ಆದ್ರೂ ಜಟ್ಟಿ ಜಾರಿ ಬಿದ್ದರು ಮೀಸೆ ಮಣ್ಣಾಗಿಲ್ಲ ಅನ್ನೋ ರೀತಿಲೀ ಬದುಕುತ್ತಿದ್ದೀನಿ. ನಮ್ ನೋವು ನೂರೆಂಟು ಸ್ವಾಮಿ ಯಾರಿಗೆಳೋದು. ಊಟಕ್ಕೆ ಅಂತ ಬಂದು ದೊಡ್ಡ ಪುರಾಣ ಬಿಟ್ಟೆ,
ಜಗದೀಶ್ : ಅಯ್ಯೋ ನಿಜ ಕಣ್ಲಾ ಇದು ಮುಗಿಯದ ಕತೆ. ನಂಗೂ ಹೊಟ್ಟೆ ಹಸಿತಿದೆ ನಡಿಲಾ ಸ್ವಲ್ಪದ್ರು ತಿಂಡ್ಕೊಂಡು ಬರೋಣ.
ಜಗದೀಶ್ ಮತ್ತು ಮಹೇಶ್, ಎಂ.ಎ. ದ್ವೀತಿಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ