ಜೀವನ ಚಕ್ರ...
ಸುಂದರ ಪ್ರಕೃತಿಯ ದ್ವೀಪದಲೊಂದು ಮರ, ಆ ಮರದಲೊಂದು ಹಕ್ಕಿ, ಹಕ್ಕಿಗೊಂದು ಪುಟ್ಟಗೂಡು. ಆ ಗೂಡಲ್ಲಿ ಚಿಲಿಪಿಲಿ ಸದ್ದು ಕೂಗುವ ಹಕ್ಕಿಯ ಮರಿಗಳು. ಒಮ್ಮೆ ಹಕ್ಕಿಯ ಮರಿಗಳು ಆಹಾರಕ್ಕಾಗಿ ರೆಕ್ಕೆ ಬಿಚ್ಚಿ ತನ್ನ ತಾಯಿಯನ್ನು ಕಂಡು ಕಿರುಚಾಡುತ್ತಿದ್ದವು. ಆ ಹಕ್ಕಿಯು ತನಗೆ ಆಹಾರವನ್ನು ಹುಡುಕುತ್ತ ಸಿಗದೆ ತನ್ನ ಗೂಡಿನ ಬಳಿ ಬಂದು ಕುಂತಿತ್ತು. ಮರಿಗಳನ್ನು ಕಂಡು ಆಹಾರಕ್ಕಾಗಿ ಸುತ್ತಮುತ್ತ ನೋಡುತ್ತ ಕುಳಿತ ಮರದ ಬುಡವೆರುತಿದ್ದ ಗೆದ್ದಲು ಹುಳುಗಳ ಸಾಲನ್ನು ಕಂಡು ಪುಟಕ್ಕೆ ತನಗೆ ಆಹಾರಸಿಕ್ಕಿತೆಂದು ಗೆದ್ದಲುಗಳ ಬಳಿ ಹಾರಿತು. ಹಕ್ಕಿಯ ಬಾಯಿಗೆ ಸಿಕ್ಕಿಬಿದ್ದ ಎಷ್ಟೋ ಗೆದ್ದಲು ಹುಳುಗಳು ಹಕ್ಕಿಗೆ ಆಹಾರವಾದವು. ಉಳಿದ ಕೆಲವು ಹುಳುಗಳು ಆ ಹಕ್ಕಿಯಿಂದ ಕಣ್ಮರೆಯಾಗಿ ಗೂಡು ಸೇರಿದವು. ಗೂಡು ಸೇರಿದ ಗೆದ್ದಲುಗಳು ತಾವು ಬದುಕುಳಿದೇವೆಂಬ ಖುಷಿ, ಹಕ್ಕಿಗೆ ತನಗೆ ಆಹಾರ ಸಿಕ್ಕಿತೆಂಬ ಖುಷಿ, ಆದರೆ ಮರಕ್ಕೆ ಈ ಹಕ್ಕಿ - ಗೆದ್ದಲು ಸೇರಿ ಎಲ್ಲಿ ತನ್ನ ತಿಂದಾವೆಂಬ ಭಯ, ಇಂತಹ ಸುಖ ದುಃಖ ಸ್ಥಿತಿಯಲ್ಲಿ ಇದ್ದಕಿದ್ದಂತೆ ಪಟಪಟನೆ ಸುರಿಯುವ ಗಾಳಿ ಮಳೆಯು ಸುರಿಯಿತು. ಗೆದ್ದಲುಗಳಿಗೆ ತಮ್ಮ ಗೂಡು ಎಲ್ಲಿ ಬಿದ್ದು ಹೋಗಿತೋ ಎಂಬ ಭಯ, ಹಕ್ಕಿಗೆ ತನ್ನ ಮರಿಗಳು ಎಲ್ಲಿ ಒದ್ದೆಯಾಗುತ್ತವೋ ಎಂಬ ಭಯ. ಆದರೆ ಮರವು ತಾನು ಸ್ವತಂತ್ರನಾಗುವೆನೆಂಬ ಖುಷಿ, ಇಳೆಗೆ ತನ್ನ ಇನಿಯ ಬಂದನೆಂಬ ಖುಷಿ. ನನಗೆ ವರುಷದ ಮೊದಲ ಮಳೆ ಹನಿಗೆ ಇಳೆ ಪುಳಿಕಿತ ಗೊಂಡು ಅದರ ಸುಗಂಧ ಬರಿದಾಗ ಅದನ್ನು ಅನುಭವಿಸುವ 2004.
ಹೀಗೆ ಇಲ್ಲಿ ಪ್ರತಿಯೊಂದು ಜೀವಿಯೂ ತನ್ನ ಸುಖ ದುಃಖಗಳ ಹೋರಾಟದಲ್ಲಿ ಬೆಂದು ತನ್ನ ಬದುಕಿಗಾಗಿ ಹೋರಾಡುತ್ತವೆ. ಸೃಷ್ಟಿಯ ನಿಯಮದಂತೆ ಪ್ರತಿ ಜೀವಿಯೂ ಬದುಕಬೇಕು. ಬದುಕಿ ಬರಡಾಗಲೇಬೇಕು ಮತ್ತೆ ಮರುಜನ್ಮ ಪಡೆಯಲೇಬೇಕು. - ಇದೆ ಜೀವನ ಚಕ್ರ,
ಮಹೇಶ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ