ಸೋಮವಾರ, ಮಾರ್ಚ್ 9, 2026

ಸಂಚಿಕೆ - ೧೧

ಬಾಲ್ಯದ ಗೆಳತಿ

ಬಾಲ್ಯದ ಆಟದಂಗಳದಲ್ಲಿ ಜೊತೆಯಾದವಳು 

ಸದ್ದಿಲ್ಲದೆಯೇ ಮನದಲಿ ಮನೆ ಮಾಡಿದವಳು 

ನೀಲಿ ಬಿಳಿ ಯೂನಿಫಾರ್ಮ್ ಅಲ್ಲೂ ಅಂದವಾಗಿ ಕಂಡವಳು 

ಅಂದಿನ ನನ್ನ ನಗುವಿಗೆ ಕಾರಣವಾಗಿ ಜೊತೆಗಿದ್ದವಳು


ಸಣ್ಣ ಪುಟ್ಟ ಜಗಳಕ್ಕೆ ಮುನಿಸಿಕೊಂಡು ಕುಳಿತಿದ್ದು 

ಒಂದೇ ಪೆಪ್ಪಿಗೆ ಇಬ್ಬರು ಕಾದು ನಿಂತಿದ್ದು 

ಇಂದು ದೂರವಿದ್ದರೂ ನೆನಪುಗಳು ಹಸಿರಾಗಿವೆ 

ನಿನ್ನ ನೆನಪು ಇಂದು ಮುತ್ತಿನ ಸರವಾಗಿದೆ


ಕಾಲ ಎಷ್ಟೇ ಬದಲಾದರು ಬಾಲ್ಯದ ಗೆಳತಿ 

ನೀನೆ ನನ್ನ ಪ್ರೀತಿಯ ಅಚ್ಚಳಿಯದ ಸ್ಮೃತಿ 

ನೂರಾರು ನೆನಪುಗಳ ನಡುವೆಯೂ ನೀನೆ ಶ್ರೇಷ್ಠ 

ನಿನ್ನ ಈ ಸ್ನೇಹವೇ ನನ್ನ ಪಾಲಿನ ಅಮೂಲ್ಯ ಇಷ್ಟ.


ಆಶ್ರಿತ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...