ಮುನಿದ ಮೋಡಣ್ಣ
ಮೋಡಣ್ಣ ಮುನಿದಾನ ಮುನಿದಾನ
ಅಣ್ಣ ತಮ್ಮರ ಕೂಡ ಜಗಳ ಆಡ್ಯಾನ
ಕಣ್ಣೀರ ಸುರಿಸ್ಯಾನ ಸುರಿಸ್ಯಾನ
ಧರೆಯಕ್ಕ ಜಳಕವ ಮಾಡ್ಯಾಳ
ನೇಗಿಲ ಹಿಡಿದು ಹೊಂಟಾನ ಈರಣ್ಣ
ಕುರಿಯನ್ನ ಹಟ್ಟಿಗೆ ಹೊಡೆದಾನ ಬೀರಣ್ಣ
ಗದ್ದಲ ಮಾಡ್ಯಾನ ಗುಡಗಣ್ಣ
ಹಸರಾಗಿ ತೆನೆ, ಸೊಗಸಾಗಿ ಸೋನೇ
ಆಗೇತಿ ದೂರ ಈ ಜೀವನ ಬೇನೆ
ಸದ್ದಿಲ್ಲದೆ ಅರಳ್ಯಾವೆ ನಾಚಿಕೆ ಮುಳ್ಳು
ಹಚ್ಚ ಹಸನಾಗಿ ಸಾಗೃತಿ ರೈತನ ಬಾಳು
ಪರಶುರಾಮ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ