ಕನ್ನಡವೇಗಿದೆ ?
ಕನ್ನಡ ಕನ್ನಡ ಎನ್ನುವಿರಲ್ಲ
ಎಲ್ಲಿಹುದಣ್ಣ ಕನ್ನಡವು
ನೊರಕ್ಕರವತ್ತಾಗಿಹುದಂತೆ
ನಲವತ್ತು ಭಾಗ ಕಳೆದಿಹುದಂತೆ
ಇನ್ನೆಲ್ಲೋಯಿತು ಹೇಳಣ್ಣ
ಸಾರ್ವಜನಿಕರ ಮಾತಲ್ಲಿದೆಯೆ
ಸರಕಾರ ರಂಗದ ಸ್ಥಳದಲ್ಲಿದೆಯೆ
ಸೌಕಾರ್ ಮಕ್ಕಳ ಚೀಲದಲ್ಲಿದೆಯೆ
ಸರ್ಕಾರಿ ಅಧಿಕಾರಿ ಮನೆಯಲ್ಲಿದೆಯೆ
ಎಲ್ಲಿದೆ ಎಂದು ಹೇಳಣ್ಣ
ಸಿನಿಮಾ ರಂಗದೊಳು ಶುದ್ಧ ಕನ್ನಡವೆ
ಉದ್ಯೋಗಗಳೀ ಕನ್ನಡಕ್ಕಿವೆಯೆ
ರಾಜಕಾರಣಿಯ ಮನದೊಳಗೇಗಿದೆ
ಗಡಿನಾಡಿನ ಜನ ಕನ್ನಡವೇಗಿದೆ
ಇನ್ನೆಲ್ಲೇಗಿದೆ ಹೇಳಣ್ಣ.
ಕಲಿಸುವವರ ಮನ ಕನ್ನಡವೇಗಿದೆ
ಕಲಿಯುವ ನಮ್ಮೊಳು ಕನ್ನಡವೇಗಿದೆ
ಸ್ವಾರ್ಥ ಬದುಕಿಗೆ ಕನ್ನಡ ಬೇಕು
ಮನದೊಳು ಬೇರೆ ಭಾಷೆಯ ಮೆಲುಕು
ಕನ್ನಡವೇಗಿದೆ ಹೇಳಣ್ಣ
ಕನ್ನಡವೆಂಬುದು ಬರಿ ಭಾಷೆಯಲ್ಲವೊ
ಭಾವದೊನ್ನುಡಿ ಕನ್ನಡ ನನ್ನುಡಿ
ನುಡಿವವರೆಲ್ಲ ಮೂಕಾಗಿ ಹೋಗಿ
ಪರನುಡಿ ಮೋಹ ಹಿಡಿದಿಹುದಲ್ಲ
ಇನ್ನೇಗೆ ಬೆಳೆದುಳಿವುದು ಹೇಳಣ್ಣ.
ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ