ಸೋಮವಾರ, ಮಾರ್ಚ್ 9, 2026

ಸಂಚಿಕೆ - ೧೧

ಹುಚ್ಚು ಮನಸು

ನಿನ್ನ ಪಡೆಯಬೇಕೆಂಬ ಬಯಕೆ  

ಬೇರಾರಿಗೋ ಸಿಗುವೆಯೆಂಬ ಚಡಪಡಿಕೆ 

ನಿನ್ನದೇ ಹಾದಿಯ ಕನವರಿಕೆ 

ಮುದ ನೀಡಿ ಸಲಹಿದೆ ನೀ ಎನ್ನ ಮನಕೆ


ಜೊತೆಯಾಗಿ ಸಿಗುವೆ ಸರಿಯಾದ ಸಮಯಕೆ 

ನಿನಗಾಗಿ ಕಾಯುತಿಹೆ ಪ್ರತಿಯೊಂದು ಘಳಿಗೆ 

ಎಲ್ಲೆಲ್ಲೂ ಕಾಡುತಿದೆ ನಿನ್ನದೇ ಮಾಯೆ 

ತಿಳಿಯದೇ ಹೋದೆ ನಾ ನಿನ್ನ ಛಾಯೆ


ಕಾಯುವೆನು ನಾ ನಿನಗಾಗಿ ನೂರಾರು ಕಾಲ 

ನಿನಗಾಗಿಯೇ ನಾ ಮಾಡಿದೆ ಜೀವನದಲ್ಲಿ ಸಾಲ 

ಬರೆದಿರುವನೇ ಬ್ರಹ್ಮ ನಮ್ಮ ಸಂಸಾರದ ಬಾಳ 

ತಾಳುವೆನು ನಾ ನಿನಗಾಗಿ ನೂರಾರು ಗೋಳ


ದುಷ್ಯಂತ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...