ಸೋಮವಾರ, ಮಾರ್ಚ್ 16, 2026

ಸಂಚಿಕೆ - ೧೨

ಮುಂಜಾನೆ ಮುಸುಕಿನಲಿ

ಮುಂಜಾನೆ ಮುಸುಕಿನಲಿ ಚಿಲಿಪಿಲಿ ಕಲರವ 

ಕಿವಿಗೆ ತಟ್ಟಿ ಹೇಳುವ ರೀತಿ ಒಂದೆಡೆ ಆದರೆ 

ಶುರುವಾಗಿದೆ ಯುದ್ಧದ ಪ್ರಹಾರಗಳ ಆಗರ 

ಜಗತ್ತನ್ನೇ ಬೆಚ್ಚಿಬೀಳಿಸುವಂತಾಗಿದೆ ಮಿಸೈಲ್‌ಗಳ ಪ್ರಹಾರ


ಅಧಿಕಾರದ ಜ್ವಾಲೆಗೆ ಯುದ್ಧದ ಅಬ್ಬರ ಹೆಚ್ಚಿದೆ ಎಲ್ಲಡೆ 

ನಮಗಿಲ್ಲಿ ಬಣ್ಣದ ಓಕುಳಿಯ ಸಂಭ್ರಮ ಒಂದೆಡೆಯಾದರೆ 

ಪರದೇಶಗಳಲ್ಲಿ ರಕ್ತದ ಓಕುಳಿ ಆವರಿಸಿದೆ ಎಲ್ಲಡೆ 

ಹೆಚ್ಚಿದೆ ಎಲ್ಲಡೆ ಹಾಹಾಕಾರದ ಕಿಚ್ಚಿನ ಬೇಗೆ


ಏನು ಅರಿಯದ ಮಕ್ಕಳ ಜೊತೆ ಸಮಾಧಿಗಳಾದವು ಶಾಲೆಗಳು 

ಹೆತ್ತವರ ಒಡಹುಟ್ಟಿದವರ ಆಕ್ರಂದನ ಮುಗಿಲೇರಿದೆ 

ಇಂದಿನ ಮಕ್ಕಳ ಮುಂದಿನ ಭವಿಷ್ಯ ಮಣ್ಣು ಸೇರಿದೆ 

ಭೀತಿಯ ಬದುಕಿಗೆ ಕಮರಿದೆ ಮುಕ್ತ ಬದುಕಿನ ಆಸೆ.


ಬರೆಯುವೆ ನಾ ಅರ್ಜಿಯೊಂದ ದೇವರಿಗೆ 

ಕಾಪಾಡು ಈ ಅಧಿಕಾರದ ಕಿಚ್ಚಿಗೆ ಸಿಲುಕಿ ಬಲಿಯಾದವರ 

ನಿನ್ನ ದಯೆಯ ಮಳೆಯ ಸುರಿದಾರಿಸು ಇದರ ಬೇಗೆಯು 

ಹಬ್ಬದಿರಲಿ ಈ ಕಿಚ್ಚಿನ ಜ್ವಾಲೆ ಈ ಭರತ ಭೂಮಿಯಲಿ


ಪವಿತ್ರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...