ಪ್ರೇಮದಿಂದೊಂದಿಷ್ಟು ದೂರ
ಕಣ್ಣ ನೋಟಕೆ ಕಾವ್ಯ ಹುಟ್ಟಿದೆ
ಹರೆಯದ ಮನಸ್ಸು ಗಡಿಯ ದಾಟಿದೆ
ಮಳೆಯ ಕಾರಣ ಭಾವ ನರ್ತನ
ಬೆಳೆದು ನಿಂತಿದೆ ಪ್ರೀತಿ ಪ್ರೇಮಾಯಣ
ಏನು ಆತುರ ಸೇರಿಕೊಳ್ಳಲು
ಆತ್ಮದೊಳಗೆ ಪ್ರೇಮ ನುಸುಳಲು
ಎಷ್ಟು ದೂರ ನಡೆದು ಹೋದರು
ದಾರಿ ಸವೆದಿದೆ, ಮಾತು ಮುಗಿಯದೆ
ಎಲೆಯ ಮೇಲಿನ ಮಂಜು
ಎದೆಯ ಒಳಗಿನ ಹಾಡು
ನಿತ್ಯ ಮೀಟಿ, ನಾದ ಹರಿದು
ಸೇರಬಲ್ಲುದೆ ಅವಳ ಹೃದಯವ?
ಈ ಪ್ರೀತಿ ಪ್ರೇಮಗಳು ನನಗಂತೂ
ಅರ್ಥಹೀನ, ಅಸಂಬದ್ಧ ಆಚರಣೆ
ಈಗಿನ ಎಲ್ಲಾ ಪ್ರೇಮ ಕತೆಗಳು
ಕೇವಲ ಬದಲಾಯಿಸುವ ಬಟ್ಟೆಯಂತೆ
ಪರಶುರಾಮ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ