ಸೋಮವಾರ, ಮಾರ್ಚ್ 9, 2026

ಸಂಚಿಕೆ - ೧೧

 ಪ್ರಕೃತಿಯ ಸೊಬಗು

ಹಸಿರು ಹೊಲದಲಿ ಹಾಸಿದ ಮಂಜು, 

ಬೆಳಗಿನ ಸೂರ್ಯನ ಹೊಳಪಿನ ರಂಜು 

ಹಕ್ಕಿಗಳ ಹಾಡಿನ ಮಧುರ ಸ್ವರ, 

ಮನದಾಳ ತಾಕುವ ಸುಂದರ ನರ


ಗಾಳಿಯ ಸ್ಪರ್ಶದಲಿ ಮರಗಳ ನಾಟ್ಯ, 

ಹೂವಿನ ಸುವಾಸನೆಯ ಮಧುರ ಗೀತ, 

ನದಿ ಹರಿದು ಹೇಳುವ ಕಥೆಗಳ ಸಾಲು, 

ಭೂಮಿಯ ಮಡಿಲಲ್ಲಿ ಜೀವದ ಜಾಲು.


ಆಕಾಶದ ನೀಲಿ ಬಣ್ಣದ ಕನಸು, 

ಮೋಡದೊಳಗಿರುವ ಮಳೆಯ ಮನಸು, 

ಪ್ರಕೃತಿ ತಾಯಿ ಕೊಡುವ ಪಾಠ, 

ಪ್ರೀತಿ, ಶಾಂತಿ ಅದರ ಮಾತು


ನಮ್ಮ ಜೀವನದ ಸುಂದರ ದಾರಿ, 

ಪ್ರಕೃತಿಯ ಜೊತೆ ಇರಲಿ ಸ್ನೇಹಸಾರಿ


ಶ್ರೀಷ್ಮ ಎಂ. ಬಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...