...ವಿಶ್ವಗುರು ಭಾರತ...
ಮನೆಮನೆಯಲಿ ಹಾರಾಡಿತು ರಾಷ್ಟ್ರ ತಿರಂಗಾ
ಸಾರಿ ಹೇಳಿತು ಜಗಕೆ ನಮ್ಮಂತರಂಗ
ಕಾಲದ ಕೊಂಡಿಯನು ಕಳಚಿ ಪ್ರತಿ ಮನೆಗೂ ಬಂತು
ಸ್ವಾತಂತ್ರ್ಯದ ಹರುಷವ ಪ್ರತಿ ಹೃದಯಕು ತಂತು
ಬೇರು ಚಿಗುರಿಗು ಸಂಭ್ರಮ ಒಂದಾಗಿ ಬೆರೆತು
ಬಿಟ್ಟು ಬಿಡು ದೇಶ ನನಗೇನು ನೀಡಿತೆಂಬ ಭ್ರಮೆಯ
ಬಂದಿದೆ ದೇಶಕ್ಕಾಗಿ ಜೀವನವ ಮುಡಿಪಾಗಿಡುವ ಸಮಯ
ದೇಶದೆಲ್ಲೆಡೆ ಗೌರವದಿ ಬಿರಿದಿದೆ ಜನಸಾಮಾನ್ಯನ ಹೃದಯ
ದೇಶವಿದು ವಿಶ್ವಗುರು ಎಂಬುದು ನಮ್ಮೆಲ್ಲರ ಹೆಮ್ಮೆಯ ವಿಷಯ
ಕಣ್ಮುಂದಿದೆ ರಾಮ ರಾಜ್ಯದ ಕನಸೀಡೇರುವ ಶುಭಸಮಯ
ಜಾತಿ-ನೀತಿ ಎಂಬುದು ಸ್ವಾರ್ಥಕ್ಕೆ ನಿರ್ಮಿಸಿದ ಬಲೆ
ದೇಶದೊಳಿತಿಗಾಗಿ ಕಡಿದು ಹಾಕು ಆ ಮುಳ್ಳ ಸಂಕಲೆ
ನಿರ್ಮಾಣವಾದೀತು ಸುಭದ್ರ ಬಲಿಷ್ಠ ತಾಯ್ತಾನಾಡು ಆಗಲೆ
ಮೇಲು ಕೀಳೆಂಬ ಭ್ರಮೆಯಿಂದ ಹೊರಬಂದು
ಹೃದಯ ಕಲ್ಮಶ ಮರೆತು ಬಾಳಬೇಕು,
ಹಿಂದೂ ನಾವೆಲ್ಲರೂ ಒಂದು
ಭಿನ್ನತೆಯಲಿ ಐಕ್ಯತೆಯನು ಕಂಡ ದೇಶ
ಬಗೆದಷ್ಟು ತೀರದ ಸ್ವಾಭಿಮಾನದ ಕೋಶ
ಹಬ್ಬ-ಹರಿದಿನವನು ಒಂದಾಗಿ ಆಚರಿಸುವುದೇ ವಿಶೇಷ
ಹೆಜ್ಜೆಗೊಂದು ನುಡಿ ಹಳ್ಳಿಗೊಂದು ಗುಡಿ ಇದುವೇ ಭಾರತ ದೇಶ
ದ್ವೇಷ ಅಸೂಯೆಯನು ತೊರೆದು ಬೆರೆತು ಬಾಳಿದರೆ ಹರಸುವನು ಈಶ
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಸರಿಸಿದ ಪ್ರಕೃತಿ ಸೊಬಗು
ದೇಶದುದ್ದಗಲದಿ ಹರಿಯುತಿಹ ನದಿ ತೊರೆಗಳ ಮೆರುಗು
ಸ್ವಾರ್ಥಲಾಲಸೆಗೆ ಬಲಿಯಾಯಿತೇ ಪ್ರಕೃತಿ ಮಾತೆಯ ಒಡಲು
ವಿಫಲವಾದೆವೆ ನಾವು ಮನುಕುಲಕೆ ಉಳಿಸಿಕೊಡಲು
ಇಂದೇ ಬದ್ಧರಾಗೋಣ ಸಸಿ ನೆಡಲು,
ತುಂಬೋಣ ಭೂ ಮಾತೆಯ ಮಡಿಲು
ಸ್ನೇಹ ಬಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ