ಬೆಳಕಿನ ರೂಪ
ಮುಂಜಾನೆಯ ಮಂಜಿನಲಿ
ಹಸಿರಸಿರಾಗಿ ಕಾಣುವ ಮರಗಳ ನಡುವಿನಲಿ
ಚಿಲಿಪಿಲಿ ಹಾಡುವ ಹಕ್ಕಿಗಳ ಕಲರವದಲಿ
ಮುಗಿಲಿಗೆ ಮುತ್ತಿಕ್ಕುವ ಆತುರದಲಿ
ನಾ ಮುಂದು ತಾ ಮುಂದು ಎಂದು
ಪೈಪೋಟಿ ಇಡುವ ಈ ನೇಸರದಲಿ
ಮರು ಕ್ಷಣವೆ ಮೋಡಗಳ ನಡುವಿನಲಿ
ಸಿಂಧೂರವೊಂದು ಇನುಕಿತು.
ಹಸಿರು ಗಿರಿಗಳು ಆಕೆ ಉಟ್ಟ ಸೀರೆಯಂತೆ ಕಾಣಲು
ನೀಲಿ ಮೋಡಗಳು ಹೊಳೆಯುವ ಕಣ್ಣುಗಳಂತೆ ಸೆಳೆಯಲು
ಸೂರ್ಯನ ಕಿರಣಗಳೆ ಆಕೆಗೆ ಆಭರಣವಾಗಲು
ಬಾಸ್ಕರನೇ ಆಕೆಗೆ ಸ್ವಾಗತ ಕೋರಲು
ಸ್ವರ್ಗವೇ ನಾಚುವಂತೆ ಆಕೆಯ ಸೊಬಗು ಕಣ್ಣ ತುಂಬಿತು
ಹರಿಯುವ ನದಿಯೇ ಆಕೆಗೆ ನಾದಸ್ವರ
ಮಾಮರದ ಕೋಗಿಲೆಯೇ ಆಕೆಗೆ ಸುಪ್ರಭಾತ
ಅರಳುತಿರುವ ಧರೆಯ ಹೂಗಳೇ ಆಕೆಗೆ ಅಲಂಕಾರ
ಮೈ ತುಂಬಿ ನಿಂತ ಆಕೆಯ ಚೆಲುವು ಎನ್ನ ಕಣ್ಣ
ಮಿಟುಕಿಸದಂತೆ ಮಾಡಲು
ಆಕೆಯ ಚೆಲುವಿಗೆ ಸಾಟಿ ಇನ್ನಾರು
ದಿವ್ಯಶ್ರೀ ಎ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ