ಅವರು ಮತ್ತು ರಂಗೋಲಿ
ವಿದ್ಯಾಲಯವೆಂಬ ದೇಗುಲದಲ್ಲಿ
ನನಗಾಯಿತು ಅವರ ಪರಿಚಯವಲ್ಲಿ
ಸಾಗಿತು ಸಮಯ ಸುಂದರವಾದ ಸ್ನೇಹದಲ್ಲಿ
ಕಾಲ ಕಳೆದು ವರ್ಷ ಉರುಳಿದ್ದು
ತಿಳಿಯದೆ ಹೋಯಿತು ಇನ್ನು ಮನದಲ್ಲಿ
ಇನ್ನಷ್ಟು ಒಂದಾಗಿಸಿತು ಕಾರ್ಯಕ್ರಮದ ಹೆಸರಿನಲ್ಲಿ
ನಾವೆಲ್ಲ ಸೇರಿ ಮೊದಲು ಹಾಕಿದ ಆ ಬಣ್ಣಗಳ ಚಿತ್ರಾವಳಿ
ಕಾಲ ಮುಗಿದು ಸಾಗಿದರು ಮುಗಿಯದು
ಆ ಕ್ಷಣಗಳಲ್ಲಿ ನಾವು ಕಳೆದ ಸುಂದರ ಕ್ಷಣಗಳ
ನೆನಪಿನ ಓಕುಳಿ..
ಲಿಖಿತ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ