ಸುಂದರವಾದ ಹುಡುಗಿ ನೀನು, ಸಂತೆಗ್ಯಾಕೋಗಿದ್ದೆ
ಸುಂದರವಾದ ಹುಡುಗಿ ನೀನು, ಸಂತೆಗ್ಯಾಕೋಗಿದ್ದೆ
ಸಕ್ಕರೆ ಗಿಕ್ಕರೆ ಇಲ್ಲ ಅಂತ, ಸಕ್ಕರೆ ತರಕೋಗಿದ್ದೆ
ಸಕ್ಕರೆ ತಂದ ಹುಡುಗಿ ನೀನು, ಸಕ್ಕರೆನೆಲ್ಲಿ ಇಟ್ಟಿದ್ದೆ
ಇರುವೆ ಗಿರುವೆ ತಿಂದವಂತ, ಇರುವೆ ಗೂಡಲ್ಲಿ ಇಟ್ಟಿದ್ದೆ ॥ ೧ ॥
ಸುಂದರವಾದ ಹುಡುಗಿ ನೀನು, ಸಂತೆಗ್ಯಾಕೋಗಿದ್ದೆ
ಉಪ್ಪು ಗಿಪ್ಪು ಇಲ್ಲ ಅಂತ, ಉಪ್ಪು ತರಕೋಗಿದ್ದೆ
ಉಪ್ಪು ತಂದ ಹುಡುಗಿ ನೀನು, ಉಪ್ಪನೆಲ್ಲಿ ಇಟ್ಟಿದ್ದೆ
ಕರಗಿ ಗಿರಗಿ ಹೋಗ್ತಿತಂತ, ನೀರಿನೊಳಗೆ ಇಟ್ಟಿದ್ದೆ ॥ ೨ ॥
ಸುಂದರವಾದ ಹುಡುಗಿ ನೀನು, ಸಂತೆಗ್ಯಾಕೋಗಿದ್ದೆ
ಹಾಲು ಗೀಲು ಇಲ್ಲ ಅಂತ, ಹಾಲು ತರಕೋಗಿದ್ದೆ
ಹಾಲು ತಂದ ಹುಡುಗಿ ನೀನು, ಹಾಲನೆಲ್ಲಿ ಇಟ್ಟಿದ್ದೆ
ಬೆಕ್ಕು ಗಿಕ್ಕು ಕುಡಿದವಂತ, ಬೆಕ್ಕಿನ ಮುಂದೆ ಇಟ್ಟಿದ್ದೆ ॥ ೩ ॥
ಸುಂದರವಾದ ಹುಡುಗಿ ನೀನು, ಸಂತೆಗ್ಯಾಕೋಗಿದ್ದೆ
ಬಳೆ ಗಿಳೆ ಇಲ್ಲ ಅಂತ, ಬಳೆ ತರಕೋಗಿದ್ದೆ
ಬಳೆ ತಂದ ಹುಡುಗಿ ನೀನು, ಬಳೆನೆಲ್ಲಿ ಇಟ್ಟಿದ್ದೆ
ಒಡೆದು ಗಿಡೆದು ಹೋಗ್ತತಂತ, ಕಲ್ಲಿನಡಿಯಲ್ಲಿ ಇಟ್ಟಿದ್ದೆ ॥ ೪ ॥
ಸುಂದರವಾದ ಹುಡುಗಿ ನೀನು, ಸಂತೆಗ್ಯಾಕೋಗಿದ್ದೆ
ಬೆಲ್ಲ ಗಿಲ್ಲ ಇಲ್ಲ ಅಂತ, ಬೆಲ್ಲ ತರಕೋಗಿದ್ದೆ
ಬೆಲ್ಲ ತಂದ ಹುಡುಗಿ ನೀನು, ಬೆಲ್ಲನೆಲ್ಲಿ ಇಟ್ಟಿದ್ದೆ
ಮಕ್ಕಳು ಗಿಕ್ಕಳು ತಿಂದವಂತ, ಮಕ್ಕಳ ಕೈಯಲ್ಲಿ ಕೊಟ್ಟಿದ್ದೆ ॥ ೫ ॥
ಸುಂದರವಾದ ಹುಡುಗಿ ನೀನು, ಸಂತೆಗ್ಯಾಕೋಗಿದ್ದೆ
ಸೀರೆ ಗೀರೆ ಇಲ್ಲ ಅಂತ, ಸೀರೆ ತರಕೋಗಿದ್ದೆ
ಸೀರೆ ತಂದ ಹುಡುಗಿ ನೀನು, ಸೀರೆನೆಲ್ಲಿ ಇಟ್ಟಿದ್ದೆ
ಇಲಿ ಗಿಲಿ ಹರಿದವಂತ, ನಾನೇ ಹರಿದು ಇಟ್ಟಿದ್ದೆ ॥ ೬ ॥
ಸುಂದರವಾದ ಹುಡುಗಿ ನೀನು, ಸಂತೆಗ್ಯಾಕೋಗಿದ್ದೆ
ಸರ ಗಿರ ಇಲ್ಲ ಅಂತ, ಸರ ತರಕೋಗಿದ್ದೆ
ಸರ ತಂದ ಹುಡುಗಿ ನೀನು, ಸರನೆಲ್ಲಿ ಇಟ್ಟಿದ್ದೆ
ಅರೆದು ಗಿರೆದು ಹೋಗ್ತತಂತ, ನಾನೇ ಅರೆದು ಇಟ್ಟಿದ್ದೆ ॥ ೭ ॥
ಸುಂದರವಾದ ಹುಡುಗಿ ನೀನು, ಸಂತೆಗ್ಯಾಕೋಗಿದ್ದೆ
ಗಂಡ ಗಿಂಡ ಇಲ್ಲ ಅಂತ, ಗಂಡನ ತರಕೋಗಿದ್ದೆ
ಗಂಡನ ತಂದ ಹುಡುಗಿ ನೀನು. ಗಂಡನೆಲ್ಲಿ ಇಟ್ಟಿದ್ದೆ
ಓಡಿ ಗೀಡಿ ಹೋಗ್ತಾನಂತ, ಮುಸುರೆ ತಿಕ್ಕಕ್ಕೆ ಇಟ್ಟಿದ್ದೆ ॥ ೮ ॥
ಜನಪದ ಸಂಗ್ರಹ - ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ