ಚಂದ ಮುಕುಂದ
ಚಂದ ಮುಕುಂದನಿವನು ಮಂದಾರ ಧರನು
ತಂದ ಆನಂದವನಿನ್ನು
ಕಂದ ಗೋವಿಂದನಿವನು ಗೋಪಿಕಾ ಪ್ರಿಯನು
ಬಂದ ಗೋಕುಲಕ್ಕೆ ಇನ್ನು
ನಂದನ ನಂದನು ಯಶೋಧ ಕಂದನು
ಬಂಧುವಲ್ಲ ಅದು ಬಂಧನವೆಂದನು
ನಿಂದಲ್ಲಾ ಅದು ಯುದ್ಧ ಸಾವೆಂದು
ನಂದೆ ಆದಿ ಅಂತ್ಯವೂ ಎಂದನು
ಪಾರ್ಥನ ಮಾತೆಯ ಮಗನಿಗೆ ಭಾವನು
ಪಾರ್ಥನ ಅಣ್ಣನ ತಾಯಿಗೆ ಅಳಿಯನು
ಪಾರ್ಥನ ಪುತ್ರನ ಮಾವನು ಇವನು
ಪಾರ್ಥನ ಪ್ರೀತಿಯ ಗೆಳೆಯನಾದನು
ಗೋವಿಂದ ನಾಮದ ಗೋಪಾಲ
ನವಿಲಲ್ಲೂ ನಿಂದನೂ ಭೂಪಾಲ
ಹೂವಿನಲ್ಲೂ ಮಕರಂದದಲ್ಲೂ
ಹಾವಿನಾಸಿಗೆಲಿ ಶಯನಿಸುವವನು
ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ