ಸೋಮವಾರ, ಡಿಸೆಂಬರ್ 8, 2025

ಸಂಚಿಕೆ - ೦೬

ಹೃದಯದಾನ

ಕೇಳು ಓ ನನ್ನ ಪ್ರೀಯಸಿಯೇ, 

ಹಸಿದವರಿಗೆ ಮಾಡು ಅನ್ನದಾನ 

ಸಾಯುವವರಿಗೆ ಮಾಡು ರಕ್ತದಾನ 

ಸತ್ತ ಮೇಲೆ ಮಾಡು ದೇಹದಾನ 

ಮೂಡರಿಗೆ ಮಾಡು ವಿದ್ಯಾದಾನ 

ಸ್ನೇಹಿತರಿಗೆ ಮಾಡು ಜೀವದಾನ


ಕುರುಡರಿಗೆ ಮಾಡು ನೇತ್ರದಾನ 

ಬಡವರಿಗೆ ಮಾಡು ಭೂದಾನ 

ನೊಂದವರಿಗೆ ಮಾಡು ಸಮಾಧಾನ 

ಇವ್ಯಾವ ದಾನಗಳನ್ನು ನಿನ್ನಿಂದ 

ಮಾಡಲಾಗದಿದ್ದರೂ ಪರವಾಗಿಲ್ಲ


ನಿನ್ನನ್ನು ಹುಚ್ಚನಂತೆ ಪ್ರೀತಿಸುವ 

ಈ ಹುಚ್ಚು ಪ್ರೇಮಿಗೆ 

ಮಾಡು ನಿನ್ನ ಹೃದಯದಾನ 

ಮಹಾದಾನ ಹೃದಯದಾನ


ಸಂಗ್ರಹ - ಶ್ರೀಷ್ಮ ಎಂ. ಬಿ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...