ಸಮಾಧಾನ
ಅಮ್ಮ ಯಾತ್ರೆಯಾದಾಗ
ಸಮಾಧಾನವಾಯಿತು,
ಇನ್ನು ನನಗೆ ಹಸಿದಿರಬಹುದು
ಪ್ರಶ್ನಿಸಲ್ಲ ಯಾರೂ ಬಳಿ ಬಂದು
ಇನ್ನು ನನಗೆ
ತಲೆ ಒಣಗುವವರೆಗೂ
ಕಾಯಬೇಕೆಂದಿಲ್ಲ,
ಕೇಳಿಬರಲು ಅಮ್ಮ ಬದುಕುಳಿದಿಲ್ಲ
ಇನ್ನು ನನಗೆ
ಸಂಧ್ಯಾ ಸಮಯ
ಹೊರಗಡೆ ಇಳಿಯಲು
ಟಾರ್ಚ್ ತೆಗಿಬೇಕೆಂದಿಲ್ಲ
ಇನ್ನು ನನಗೆ ಬಾವಿಯ ಬಳಿ ಕೂತು
ಪುಸ್ತಕ ಓದಬಹುದು,
ಜೋರಾಗಿ ಕರೆಯುವ ಅಮ್ಮನ
ಶಬ್ದ ಕೇಳಿ ಭಯಪಡಬೇಕಾಗಿಲ್ಲ
ಇನ್ನು ನನಗೆ
ತಲುಪಿದಲ್ಲೇ ನಿದ್ದೆಗೆ ಜಾರಬಹುದು
ನಾನು ತಲುಪಿದರೆ ಮಾತ್ರ
ಆರುವ ಬೆಳಕುಳ್ಳ ಮನೆಯ ದೀಪ
ನಿನ್ನೆ ಆರಿ ಹೋಯಿತು
ಸಲೀಂ ಸುಳ್ಯ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ