ತಾಳ್ಮೆ
ಒಂದೂರಿನಲ್ಲಿ ಸಾಕವ್ವ ಎಂಬುವವಳು ವಾಸಿಸುತ್ತಿದ್ದಳು. ಅವಳಿಗೆ ರಾಮು ಎಂಬ ಒಬ್ಬ ಮಗನಿದ್ದ. ಕಡು ಬಡವರಾಗಿದ್ದ ಇವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ಇವರದಾಗಿತ್ತು. ಸಾಕವ್ವ ಬೇರೆಯವರ ಮನೆ ಕೆಲಸಕ್ಕೆ ಹೋಗುತ್ತಿದ್ದಳು. ಆಕೆಯ ಮಗ ರಾಮು ಊರಿನಲ್ಲಿ ಕೆಲಸ ಸಿಗದ ಕಾರಣ ಆತ ಆ ಊರನ್ನು ತೊರೆದು ಪಟ್ಟಣವೊಂದರಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಂಡಿದ್ದ. ಆಗೊಮ್ಮೆ ಹೀಗೊಮ್ಮೆ ತನ್ನ ತಾಯಿಯ ನೆನಪಾದಾಗ ಊರಿಗೆ ಬಂದು ತಾಯಿಯನ್ನು ನೋಡಿಕೊಂಡು ಮತ್ತೆ ಪಟ್ಟಣಕ್ಕೆ ಹಿಂದಿರುಗುತ್ತಿದ್ದ. ಹೀಗೆ ಹಲವು ದಿನಗಳು ಉರುಳಿದವು ಎಂದಿನಂತೆ ರಾಮು ಹೋಟೆಲ್ ನಲ್ಲಿ ಕೆಲಸ ಮಾಡಿ ಸಂಜೆ ವಿಹಾರಕ್ಕೆಂದು ಹೊರಗಡೆ ಹೋಗುತ್ತಿರುವಾಗ ಆತನ ಕಣ್ಣಿಗೆ ಚಿನ್ನ ತುಂಬಿದ ಬ್ಯಾಗ್ ಒಂದು ಕಾಣಿಸುತ್ತದೆ. ಅದನ್ನು ನೋಡಿದ ರಾಮುವಿಗೆ ಚಿನ್ನದ ಮೇಲೆ ವ್ಯಾಮೋಹ ಉಂಟಾಗಿ ಆ ಬ್ಯಾಗನ್ನು ಯಾರಿಗೂ ಕಾಣದಂತೆ ಹೋಟೆಲ್‌ನಲ್ಲಿ ಬಚ್ಚಿಡುತ್ತಾನೆ. ಮಾರನೇ ದಿನ ಆತ ತಾನು ಹೇಗೋ ಕೋಟ್ಯಾಧಿಪತಿಯಾಗುವವನು ಈ ಕಡಿಮೆ ಸಂಬಳಕ್ಕಾಗಿ ಈ ಹೋಟೆಲ್‌ನಲ್ಲಿ ಕೆಲಸ ಮಾಡುವುದೇ? ಎಂದು ಅಹಂಕಾರದಿಂದ ಆ ಕೆಲಸವನ್ನು ತ್ಯಜಿಸಿ ಅಲ್ಲಿಂದ ಊರಿಗೆ ಬರುತ್ತಾನೆ. ತನಗೆ ಚಿನ್ನದ ಬ್ಯಾಗ್ ದೊರೆತ ಬಗ್ಗೆ ರಾಮು ತನ್ನ ತಾಯಿ ಬಳಿ ಕೂಡ ಹೇಳದೆ ಆ ಊರಿನ ನದಿ ಬಳಿ ಅದನ್ನು ಬಚ್ಚಿಡುತ್ತಾನೆ. ಹಾಗೆ ಬಚ್ಚಿಟ್ಟು ಆತ ಮನೆಗೆ ಹಿಂದಿರುಗಿ ಸಂತೋಷದಿಂದ ಊಟ ಮಾಡಿ ಮಲಗುತ್ತಾನೆ. ನಾಳೆ ಹೇಗಾದರೂ ಮಾಡಿ ಆ ಚಿನ್ನವನ್ನು ಮಾರಿ ಹಣವನ್ನು ಪಡೆದರೆ ಆಯ್ತು ಎಂದು ಭಾವಿಸಿ ನಿದ್ದೆಗೆ ಜಾರುತ್ತಾನೆ. ಬೆಳಗ್ಗೆ ಬೇಗ ಎದ್ದು ಆತ ತಾಯಿಗೂ ಈ ವಿಷಯ ತಿಳಿಸದೆ ಆ ಚಿನ್ನವನ್ನು ಬಚ್ಚಿಟ್ಟ ನದಿಯ ಬಳಿ ಹೋಗಿ ನೋಡುತ್ತಾನೆ. ಆದರೆ ಅಲ್ಲಿ ಚಿನ್ನದ ಬ್ಯಾಗ್ ಇಲ್ಲದ್ದನ್ನು ನೋಡಿ ತಾನು ಎಂತ ದೊಡ್ಡ ತಪ್ಪು ಮಾಡಿದೆ. ಈ ಚಿನ್ನದ ಮೇಲಿನ ವ್ಯಾಮೋಹದಿಂದ ಪಟ್ಟಣದಲ್ಲಿ ಇದ್ದ ಹೋಟೆಲ್ ಕೆಲಸವನ್ನು ಬಿಟ್ಟು ಬಂದೆ. ಮುಂದೆ ತನ್ನ ಜೀವನ ಹೇಗೆ ನಡೆಸುವುದೆಂದು ತಲೆಯ ಮೇಲೆ ಕೈ ಇಟ್ಟು ಚಿಂತಿಸುತ್ತಾ ಅಲ್ಲೆ ಕುಳಿತುಬಿಡುತ್ತಾನೆ. ಮನುಷ್ಯನಿಗೆ ಜೀವನದಲ್ಲಿ ಅತಿ ಮುಖ್ಯವಾಗಿ ತಾಳ್ಮೆ ಇರಬೇಕು ಎಂಬುದನ್ನು ಇಲ್ಲಿ ಕಾಣಬಹುದಾಗಿದೆ.
ರಮ್ಯಶ್ರೀ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ