ಸೋಮವಾರ, ಡಿಸೆಂಬರ್ 1, 2025

ಸಂಚಿಕೆ - ೦೫

ನಾ ಹೊಲೆಯ

ನಾ ಹೊಲೆಯನಯ್ಯ ನಾ ಹೊಲೆಯ 

ಹೊಲಸು ತಿನ್ನುವ ಹೊಲೆಯ

ನಿಮ್ಮ ಮನೆಯ ಹೊಲಸು ತಿಂದು ಬದುಕುವ ಹೊಲೆಯ 

ಹುಟ್ಟುವಾಗಲೇ ವಿದ್ಯೆಯಿಂದ ದೂರಾಗಿ

ಹುಟ್ಟುವಾಗಲೇ ಜನರಿಂದ ದೂರಾಗಿ ಬದುಕುವ ಹೊಲೆಯ

ಹುಟುತಲೇ ಬಡತನದಲ್ಲಿ ಬೆಳೆಯುವ ಹೊಲೆಯ

ನಾಯಿಗೆ ಬಿಸಾಕಿದ ಹಾಗೆ ರೊಟ್ಟಿಯನ್ನು

ಬಿಸಾಕಿದರು ತಿನ್ನುವ ಹೊಲೆಯ

ಹೇಳಿದ ಕೆಲಸವ ಬಾಯಿ ಮುಚ್ಚಿಕೊಂಡು ಮಾಡುವ ಹೊಲೆಯ

ಹಿಂದಿನಿಂದಲೆ ಬಂದ ಅನಿಷ್ಟ ಬಾಲ್ಯ ವಿವಾಹಕ್ಕೆ 

ಒಳಗಾದ ಹೊಲೆಯ

ನಿಮಗೆ ಮರಣ ಮೃದಂಗ ಬಾರಿಸಿದ ಮರುಗಳಿಗೆ 

ತಮಟೆ ಬಾರಿಸುವ ಹೊಲೆಯ

ನನ್ನ ಕಾಲು ಸುಟ್ಟರು ನಿಮ್ಮ ಕಾಲಿಗೆ ಚಪ್ಪಲಿ 

ಹೊಲೆಯುವ ಹೊಲೆಯ

ಚಿಪ್ಪಿನಲ್ಲಿ ಚಹ ಕುಡಿದ ಹೊಲೆಯ

ಚಪ್ಪಲಿ ಬಿಡುವ ಜಾಗದಲ್ಲಿ ಕುಳಿತುಕೊಳ್ಳುವ ಹೊಲೆಯ

ನನ್ನ ಊಟದ ತಟ್ಟೆ ನನ್ನ ಹಿಂದೆ

ತೆಗೆದುಕೊಂಡು ಬರುವ ಹೊಲೆಯ

ಇವರೆಗೂ ಯಾರ ಕಣ್ಣಿಗೂ ಬೀಳದ ಹೊಲೆಯ 

ಹೊಲೆಯನಯ್ಯ ನಾ ಹೊಲೆಯ


ರವಿ ಅ.ಮ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...