ಶಾಸ್ತ್ರಗುಳು (ಜನಪದರ ನುಡಿಗಳು)
- ಮಾರಿಮ್ಯಾಗಳ ಬಣ್ಣ ಊರಿಗಿ ಮೂಲ.
- ಗಣಗಣ ಅಂದೋರು ಘಂಟೆ ನುಂಗಿದ್ರಂತೆ, ಗುನುಗುನು ಅಂದೋರು ಗುಮ್ಮಿ ನುಂಗಿದ್ರಂತೆ.
- ಮಾಡ್ಕಂಡು ತಿಂದ್ರೆ ಮಂದಿ ಕಾಟ, ಬೇಡ್ಕೊಂಡು ತಿಂದ್ರೆ ನಾಯಿ ಕಾಟ.
- ಹಿರೆಕ್ಕನ್ ಚಾಳೆ ಮನೆ ಮಂದಿಗೆಲ್ಲಂತೆ
- ಒಂದು ಕೊಣ್ಣು ಕೊಣ್ಣಲ್ಲಾ, ಒಬ್ಬ ಮಗ ಮಗನಲ್ಲ.
- ಮೂರ್ಗಂಟೆ ಮ್ಯಾಗ ಉಂಬ ಊಟಲ್ಲ, ಮುವತ್ರ ಮ್ಯಾಗಾಗೊ ಮದಿವಲ್ಲಂತೆ.
- ಮಾತ್ ಕಲ್ತೊಳು ಮನೆ ಹಾಳು, ತುಂಬ ಬಿತ್ತೊನ್ ವಲ ಹಾಳು.
- ಕರ್ಸಿ ಕಟ್ಟೋರಿಲ್ಲ ತುರ್ಸಿ ಮೇವಾಕೊರಿಲ್ಲ.
- ಆಸತ್ ಬ್ಯಾಸತ್ ಅಕ್ಯುನ್ ಮನಿಗಿ ಬಂದ್ರೆ, ಅಕ್ಕುನ್ ಗಂಡ ಬಂದು ತೆಕ್ಕಿಗಿ ಬಡ್ಕಂಡ್ನಂತೆ.
- ಹಗಲೆಲ್ಲ ಹರಗ್ಯಾಡಿ ಗಂಡ ಬರುವಾಗ, ಬಿರಿ ಬದು ಮಾಡ್ತಿದ್ದಂತೆ.
- ಮೆಚ್ಚಿದೋಳ್ಗಿ ಮರಣಸುಖವಾದ್ರೆ ಹುರ್ಚ್ಚ, ನಾಯ್ಗಿ ಆರ್ಯಾಣ ಸುಖವಂತೆ.
- ತುಟಿಗಿ ತುಪ್ಪ ಹಚ್ಚಿ, ಮರ ಹೋಳ್ಗಿ ಉಂಡ್ರಂದ್ಲಂತೆ.
- ಕರ್ದು ಮಗ್ಳಿಗೆ ಕೊಟ್ರೆ, ಅಳಿಯಾಗ ಮಳ್ ರೋಗ ಬಂದಿತ್ತಂತೆ.
- ವಾದ್ಯೊಳ್ ಕುಡ ವಾದಿ ಮಾಡ್ಲಾಸಲ್ಲ, ಗೂದ್ಯೊಳ್ ಕುಡ ಹಾದಿ ನೆಡ್ಲಾಸಲ್ಲ.
- ಗೂಳಿ ಗುದ್ಯಾಟ ಬೆಳೆಗಿ ಮೂಲಾತಂತೆ.
- ಕಾಲಿಡ್ದಾಂಗ ಮಾಡಿ ಕಾಲುಂಗ್ರ ಕೇಳಿದ್ರಂತೆ.
- ಕೆಂಡ ಸೆರ್ಗಿಗೆ ಕಟಿಗೆಂಡು, ಕೌಡಶಾಸ್ತ್ರ ಕೇಳಕೋದ್ಲಂತೆ.
- ಅವ್ವಗೆ ಬೀಪಿ ಚಿಂತೆ ಆದ್ರ, ಮಗ್ಳಿಗೆ ಕಾಪಿ ಚಿಂತ್ಯಂತೆ
ಜನಪದ ಸಂಗ್ರಹ :- ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ