ಸ್ವಾತಂತ್ರ್ಯದೆಡೆಗೆ
ಮಂಗಳ ಮಂಗಳೂರು ವಿಶ್ವವಿದ್ಯಾನಿಲಯದ ಗಂಗೋತ್ರಿಯ ವಿಜ್ಞಾನ ವಿಭಾಗದ ಹೊರ ಆವರಣದಲ್ಲಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಎರಡು ದಿನಗಳ ಕಾಲ ನಡೆದ 'ಕಲಾ ದರ್ಪಣ' ವೇಳೆ ಮೂಡಿಬಂದಿರುವ ಚಿತ್ರವಿದು. ಅಷ್ಟೆಲ್ಲಾ ಚಿತ್ರವಿದ್ದರೂ ಸಹ ಏಕೋ ಏನೋ ನನಗೆ ಈ ಚಿತ್ರ ನನ್ನ ಕಣ್ಣುಗಳಿಗೆ ಆಕರ್ಷಣೀಯವಾಗಿ ಕಂಡಿತು. ಈ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಾಗ ಇದು ಒಂದು ಭಾವನಾತ್ಮಕವಾಗಿ ಮೂಡಿಬಂದ ಚಿತ್ರವೆನಿಸಿತು.
ಈ ಚಿತ್ರವನ್ನು ನಾನು ಗಮನಿಸಿದಾಗ ಇಲ್ಲಿ ಮಹಿಳೆಯ ಆಸೆ ಕನಸುಗಳು ಮೌನವಾಗಿ ಪ್ರತಿರೂಪಿಸಿದೆ. ಆಕೆಯು ಬಂಧಿಯಾಗಿರುವ ಬಂಧನದಿಂದ ಮುಕ್ತಿಯನ್ನು ಪಡೆಯಲು ಹಂಬಲಿಸುವಂತೆ ಈ ಚಿತ್ರ ಕಾಣಬಹುದು ಎನ್ನುವುದು ನನ್ನ ಅನಿಸಿಕೆ, ಗಾಳಿಯ ಪಟದಂತೆ ಅವಳಿಗೂ ಸಹ ರೆಕ್ಕೆ ಬಿಚ್ಚಿ ಹಾರಾಡುವ ಬಯಕೆ, ಆಸೆಗಳಿದ್ದರೂ ಸಹ ಗಾಳಿಪಟವು ಹೇಗೆ ಸೂತ್ರಧಾರನು ದಾರವನ್ನು ಹರಿಬಿಟ್ಟರೆ ಗಾಳಿಪಟ ಆಕಾಶದತ್ತ ಹೋಗುತ್ತವೆಯೋ, ವೆಯೋ, ಹಾಗೆಯೇ ಆಕೆಗೆ ಎಷ್ಟೇ ಆಸೆ, ಆಕಾಂಕ್ಷೆಗಳಿದ್ದರೂ ಸಹ ಅವಳು ಬೇರೊಬ್ಬರ ಕೈ ಗೊಂಬೆಯಾಗಿ ಬಿಡುತ್ತಾಳೆ.
ಇಲ್ಲಿ ಮಹಿಳೆಯ ಮುಖದಲ್ಲಿ ಅರಿವಿಲ್ಲದ ರೀತಿಯ ಒಂದು ಹುಡುಕಾಟವು ಕಾಣುತ್ತದೆ. ಕಿಟಕಿಯ ಆಚೆಯಿಂದ ಬರುವ ಬೆಳಕು. ಆದರೆ ಹೊರಹೋಗಲು ಕಾಣದ ದಾರಿಗಳು. ಅಂದರೆ ಅವಳು ಸ್ವಾತಂತ್ರ್ಯವನ್ನು ಪಡೆಯಲು ಬಯಸುವಳು, ಆದರೆ ಆಕೆಗೆ ಬಂಧನದಿಂದ ಮುಕ್ತಿ ಪಡೆಯಲು ದಾರಿ ಕಾಣುತ್ತಿಲ್ಲ. ಆಕೆಯ ಒಂದು ಮೌನ, ರೋಧನೆ. ನೋವು ಯಾರಿಗೂ ಕಾಣಬಾರದು ಎಂದು ಆಕೆಯು ಸೆರಗನ್ನು ಕಣ್ಣಿನ ಮುಚ್ಚಿಕೊಂಡಿರಬಹುದು.
ಒಟ್ಟಾರೆಯಾಗಿ ಈ ಚಿತ್ರದಲ್ಲಿ ಮೂಡಿ ಬಂದಿರುವ ಬಣ್ಣಗಳು ಕೇವಲ ಬಣ್ಣಗಳಲ್ಲದೇ, ಶಾಂತಿಯ ಪ್ರತಿರೂಪ, ಆಕೆ ಹೊತ್ತಿರುವ ಕನಸುಗಳ ಪ್ರತಿರೂಪ. ಆಕೆಯ ಒಂದು ಏಕಾಂಗಿತನವನ್ನು ಬಿಂಬಿಸುತ್ತದೆ. ಇದರಲ್ಲಿ ಕೊನೆಯದಾಗಿ ಕಂಡುಬಂದಿರುವುದು ಏನೆಂದರೆ ಪ್ರತಿಯೊಬ್ಬರ ಬದುಕಿನಲ್ಲೂ ಹೇಳಲಾರದ ಒಂದು ಕಥೆಯಿರುತ್ತದೆ. ಅವರ ಮೌನವೇ ಜೋರಾಗಿ ಮಾತನಾಡುತ್ತದೆ.
ಪ್ರಥ್ವಿ ನಾಯ್ಕ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ