ಕೈ ಗೊಂಬೆ ನಾವು
ಕೈಲಿ ಮೊಬೈಲ್ ಕಣ್ಣು ಅದರಲ್ಲೇ ಸ್ಥಿರ,
ಬೆಳಕು ಹೋದರೆ ನಮಗೆಲ್ಲ ಭಯ, ಅಂಧಕಾರ,
ಸಣ್ಣ ಪೆಟ್ಟಿಗೆಯಲ್ಲಿ ಇಡೀ ಜಗತ್ತು ಅಡಗಿದೆ,
ನಾವು ಅದರೊಳಗೆ ಬಂಧಿಯಾದ ಕೈಗೊಂಬೆ.
ನಮ್ಮದೇ ಬೆರಳುಗಳು ನಮ್ಮನ್ನೇ ತಿರುಗಿಸುತ್ತಿದೆ,
ರಿಯಲ್ ಲೈಫ್ ಗಿಂತ ರೀಲ್ಸ್‌ನಲ್ಲಿ ಖುಷಿ ಸಿಕ್ಕಿದೆ.
ಪಕ್ಕದವರ ಮಾತಿಗಿಲ್ಲ ಬೆಲೆ ಸ್ಟೇಟಸ್ ಅಪ್‌ಡೇಟ್ ಮುಖ್ಯ,
ಮನಸ್ಸಿನ ನೆಮ್ಮದಿಯೆಲ್ಲ ಅಲ್ಲಿ ಬರೀ ಕೃತಕ ಸತ್ಯ.
ಸಾಮಾಜಿಕ ಜಾಲತಾಣದಲಿ ನಮ್ಮ ದಿನಚರಿ
ಒಳಗೆ ನೋವಿದ್ದರೂ ಹೊರಗೆ ನಗುವ ಪರಿ
ಲೈಕ್ ಶೇರ್‌ಗಳಿಗಾಗಿ ನಾವು ಕಾಯುವೆವು
ಅದೇ ನಮ್ಮ ಘನತೆ ಅದೇ ನಮ್ಮ ಜೀವನ ಎನ್ನುವೆವು.
ಪ್ರೀತಿ, ಸ್ನೇಹ, ಸಂಬಂಧ ಎಲ್ಲ ಆನ್‌ಲೈನ್ನಲ್ಲಿ
ಹತ್ತಿರವಿದ್ದರೂ ಮೌನ ಮೊಬೈಲ್‌ನಲ್ಲಿ ಎಲ್ಲರೊಂದಿಗೆ ಗೆಳೆತನ
ಮುಖ ಎತ್ತಿ ನೋಡಲು ನಮಗಿಲ್ಲ ಸಮಯ
ಸತ್ಯದ ಬದುಕಿನಲಿ ಇಂಟರ್ನೆಟ್ನದೇ ಮಾಯೆ.
ಮರೆತಿದ್ದೇವೆ ನಾವು ಪ್ರಕೃತಿಯ ಸೌಂದರ್ಯ
ಮರೆತಿದ್ದೇವೆ ನಾವು ಹೃದಯ ಸೌಹಾರ್ದ
ಪರದೆ ಹಿಂದಿನ ಲೋಕದಲಿ ನಾವು ನಾವಲ್ಲ
ನಾವು ಬರೀ ವೈರಲ್ ಆಗುವ ಒಂದು ಕಣ್ಣಟ್ಟು
ಎಚ್ಚರವಾಗಲಿ ಮನಕ್ಕೆ ಬಿಡೋಣ ಈ ಬಂಧನ,
ಬದುಕೋಣ ಮುಖಾಮುಖಿ ಬಿಡೋಣ ಈ ತಂತ್ರಜ್ಞಾನ
ಮೊಬೈಲ್ ಇರಲಿ ಸಾಧನ ಗುರಿಯಲ್ಲ ಎಂದಿಗೂ,
ಕೈಗೊಂಬೆಯಾಗದೆ, ನಮ್ಮ ಬದುಕಿಗೆ ನಾವೇ
ಯಜಮಾನರಾಗೋಣ!
ಸಂಗ್ರಹ - ಪುನೀತ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ