ಸೋಮವಾರ, ಅಕ್ಟೋಬರ್ 27, 2025

ಸಂಚಿಕೆ - ೦೧

 ನವಿಲು ಗರಿ

      ಗೌರಿ ಏಳನೇ ಕ್ಲಾಸ್‌ನಲ್ಲಿ ಕಲಿಯುತ್ತಿದ್ದ ಹುಡುಗಿ. ಆಕೆ ಶಾಲೆಗೆ ಯಾವಾಗಲೂ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಳು. ಗೌರಿ ಹೋಗುತ್ತಿದ್ದ ದಾರಿಯಲ್ಲಿ ನವಿಲುಗಳ ಹಿಂಡು ಯಾವಾಗಲೂ ಅವಳಿಗೆ ಸಿಗುತ್ತಿತ್ತು. ಆ ನವಿಲುಗಳ ಹಿಂಡು ಕಂಡಾಗ ಸಂತೋಷ ಕೂಡ, ಅದೇ ರೀತಿ ಬೇಸರವಾಗುತ್ತಿತ್ತು. ಯಾಕೆಂದರೆ ನವಿಲುಗಳ ಬಳಿ ಅಷ್ಟೊಂದು ಗರಿಗಳು ಇದ್ದರೂ ಕೂಡ ಒಂದು ನವಿಲು ಗರಿಯನ್ನು ಉದುರಿಸಿಕೊಂಡು ಹೋಗುತ್ತಿರಲಿಲ್ಲ ಅದು ಆಕೆಗೆ ತುಂಬಾ ಬೇಸರ ಉಂಟುಮಾಡಿತು. ಗೌರಿ ಶಾಂತಿಯಿಂದ ಮನೆಗೆ ಬಂದ ತಕ್ಷಣ ಆ ಬೇಸರವನ್ನು ಆಕೆಯ ಅಮ್ಮನಲ್ಲಿ ವ್ಯಕ್ತಪಡಿಸುತ್ತಿದ್ದಳು.

      ದಿನಾಲೂ ಶಾಲೆಗೆ ಹೊರಡ ಹೊರಡಿಕೊಂಡು ಗೌರಿ ಶಾಲೆಗೆ ಹೊರಟಳು. ಆಕೆ ಯಾವಾಗಲೂ ಹೋಗುವ ದಾರಿಯಲ್ಲಿ ಮತ್ತೆ ನವಿಲುಗಳ ಹಿಂಡು ಸಿಕ್ಕಿತ್ತು. ಆಕೆ ಮನಸ್ಸಿನಲ್ಲೇ ನನಗೆ ಇವುಗಳನ್ನು ನೋಡಿ ಬೇಸರ ಪಡುವ ಕೆಲಸ ಎಂದುಕೊಂಡು. ತನ್ನ ಪಥವನ್ನು ನೋಡಿಕೊಂಡು ಚಲಿಸಿದಳು. ಹೀಗೆ ಮುಂದೆ ಹೋಗುವಾಗ ಆಕೆಗೆ ಒಂದು ನವಿಲು ಗರಿ ಸಿಕ್ಕಿತು. ಆಕೆ ಆ ಗರಿಯನ್ನು ಕಂಡು ಸಂತೋಷದಿಂದ ಕುಣಿದಾಡಿದಳು. ಅದು ಅಲ್ಲದೆ ಅದನ್ನು ಎತ್ತಿಕೊಂಡು ಶಾಲೆಗೆ ಹೋಗಿ ತನ್ನ ಸಂತೋಷವನ್ನು ಸ್ನೇಹಿತರಿಗೆ ಹಾಗೂ ಟೀಚರ್ ಎಲ್ಲರಿಗೂ ತನ್ನ ಸಂತೋಷವನ್ನು ವ್ಯಕ್ತಪಡಿಸಿದಳು. ಸಂಜೆ ಮನೆಗೆ ಬಂದ ತಕ್ಷಣ ಅಮ್ಮನ ಬಳಿ ಓಡಿಕೊಂಡು ಹೋಗಿ ತನ್ನ ಸಂತೋಷವನ್ನು ವ್ಯಕ್ತಪಡಿಸಿದಳು.

      ಗೌರಿ ಆ ನವಿಲು ಗರಿಯನ್ನು ಗೋಡೆಗೆ ಅಂಟಿಸಬೇಕೆಂದು ಯೋಚಿಸಿ ಅದಕ್ಕೆ ಅಂಟಿಸಲು ಅಂಟಿಸುವ ಪದಾರ್ಥವನ್ನು ತಂದು ಗರಿಗೆ ಹಚ್ಚಿಸಿ ಗೋಡೆಗೆ ಅಂಟಿಸಿಯೇ ಬಿಟ್ಟಳು. ಆಕೆಗೆ ದಿನಾಲೂ ಬೆಳಿಗ್ಗೆ ಶಾಲೆಗೆ ಹೊರಡುವಾಗ ಅದನ್ನು ನೋಡಿಕೊಂಡು ಹೊರಡುವುದು ಆಕೆಯ ದಿನನಿತ್ಯದ ಕಾರ್ಯವಾಯಿತು. ಅದನ್ನು ನೋಡುವಾಗ ಆಕೆಗೆ ಸಂತೋಷವಾಗುತ್ತಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಉದ್ದವಾಗಿದ್ದ ಆ ನವಿಲು ಗರಿಯು ಇಂದು ಸಣ್ಣದಾಗಿ ಕಾಣುತ್ತಿತ್ತು. ಅದನ್ನು ಗಮನಿಸಿದ ಗೌರಿ ಇದು ಹೇಗೆ ಸಾಧ್ಯ? ಗರಿ ಸಣ್ಣದಾಗುತ್ತಿದೆಯಲ್ಲ ಎಂದು ಯೋಚಿಸುವಾಗ ಇದು ನಮ್ಮ ವಠಾರದ ಮಕ್ಕಳ ಕೆಲಸ ಇರಬೇಕು. ಆ ನವಿಲು ಗರಿಯನ್ನು ಕತ್ತರಿಸಿ ಇಡಬೇಕೆಂದು ಯೋಚಿಸಿದಳು. ಅದನ್ನೇ ಎನ್ನಿಸಿಕೊಂಡು ಶಾಲೆಗೆ ಹೊರಟಳು.

      ಮರುದಿನ ಶಾಲೆಗೆ ರಜೆ ಹಾಕಿ ಇದು ಮಕ್ಕಳ ಕೆಲಸವೇ, ಬೇರೆ ಯಾರದೆಂದು ಹುಡುಕಬೇಕು ಎಂದು ಯೋಚನೆ ಮಾಡಿ ಶಾಲೆ ರಜೆ ಹಾಕಿದಳು. ಆ ನವಿಲು ಗರಿಯ ಪಕ್ಕದ ಮೂಲೆಯಲ್ಲಿ ಕುಳಿತುಕೊಂಡು ಗಮನಿಸುತ್ತಿದ್ದಳು. ಆದರೆ ಸಂಜೆ ತನಕ ಯಾವ ಮಕ್ಕಳು ಬರಲೇ ಇಲ್ಲ. ಗೌರಿ ಇದು ಯಾರ ಕೆಲಸ ಇರಬೇಕೆಂದು ಚಿಂತಿಸಿದ್ದಳು ಮತ್ತೆ ಮರುದಿನ ಶಾಲೆಗೆ ಹೊರಡುವಾಗ ನವಿಲು ಗರಿಯನ್ನು ಜೇಡ ತಿನ್ನುತ್ತಿತ್ತು. ಇದನ್ನು ನೋಡಿದ ಆಕೆಗೆ ಆಶ್ಚರ್ಯವಾಯಿತು.

      ಈ ಜೇಡ ಗರಿಯನ್ನು ತಿನ್ನುತ್ತದೆ ಎಂದು ಅದನ್ನು ತೆಗೆದು ಒಳಗೆ ಇಡುವ ಎಂದು ಗರಿಯನ್ನು ಎಳೆದಳು. ಆದರೆ ಆಕೆ ಎಳೆದ ರಭಸದಲ್ಲಿ ಗರಿ ಎರಡು ಭಾಗವಾಗಿ ಒಂದು ಭಾಗವು ಗೌರಿಯ ಕೈಯಲ್ಲಿ ಮತ್ತೊಂದು ಭಾಗ ಗೋಡೆಯಲ್ಲೇ ಉಳಿಯಿತು. ಗೌರಿಗೆ ತುಂಬಾ ಬೇಸರವಾಗಿ ಕೂಗಿಯೇ ಬಿಟ್ಟಳು.

      ಗೋಡೆಯಲ್ಲಿ ಉಳಿದಂತಹ ಗರಿಯನ್ನು ಜೇಡ ತಿಂದು ತಿಂದು ಖಾಲಿ ಮಾಡಿತ್ತು. ಗೌರಿಗೆ ತಾನು ಇಷ್ಟಪಟ್ಟು ತಂದ ಗರಿಯು ಇಲ್ಲದಂತಾಯಿತು. ನನಗೆ ಗರಿಯು ಸಿಗುವುದಿಲ್ಲ. ಆದ್ದರಿಂದ ನಾನು ನವಿಲುಗಳ ಹಿಂಡು ಕಂಡು ಖುಷಿಪಡುತ್ತೇನೆಂದು ಯೋಚಿಸಿ ಸಂತೋಷವಾಗಿದ್ದಳು.

ಪಲ್ಲವಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...