ಸೋಮವಾರ, ಅಕ್ಟೋಬರ್ 27, 2025

ಸಂಚಿಕೆ - ೦೧

 ಶ್ರಾವಣದ ಸುಗ್ಗಿ

      ಹಡ್ಡಾಕಿ ದೂರ ದಬ್ಬಿದ್ರೂ ಭೂಮಿತಾಯಿ ದಬ್ಬಂಗಿಲ್ಲ ಅಂಬ ಮಾತೈತೆ. ಅಂಗೆ ನಂಬಿ ಬಕ್ಕೋರು ಬಾಳ್ಮಂದಿ. ಮನ್ಷ ಹುಟ್ಟಿ ಸಾಯತನ ಅನುಬೊಸದು ಬಾಳೈತೆ "ಬರವ್ವೋ ಬರಿ ಜಲ್ದಿ" ಅಂದ್ಕಂತ ತೆಲೆ ಮ್ಯಾಗ ಬುತ್ತಿ ಇಟ್ಟು ಸರಸರ ಬಂದು ಟ್ಯಾಕ್ಟ್ರಿ ಏರಿದ್ಲು ಗಂಗಮ್ಮ. 

      ಇದೇನು ಅನ್ಕಂಡ್ರ, ಇದು ಸುಗ್ಗಿ ಬದ್ಕ ಮಾಡೊರ ಮಾತು. ಆಶಾಡಲಿಂದ ಶ್ರಾವಣತ್ತನ ಹಚ್ಚುವ(ಭತ್ತ ನಾಟಿ ಮಾಡುವ) ಕಾಲ ನಸುಗಿನ್ಯಾಗ ಎದ್ದು ಮುಸುಗು ಸರಿ ವತ್ಗೆ ಅಡ್ಗಿಮಾಡೋರು. ಸೂರ್ಯ ಸೀಳೊವತ್ಗೆ ಮೈ - ಕೈ ಮುಗಿಸಿ. ಪೂಜಿ ಮಾಡಿ ಓಣ್ಯಾಗ ಒತ್ತಟಿಲಿದ್ದ ಬಂಟದವ್ರನೆಲ್ಲನೊ ಕರ್ದು, ಗಾಡಿ ಏರೊರು, ರೈತ್ರು ಅಂದ್ರೇನೆ ಅಂಗೆಲ್ವ ಕೊಣ್ತುಂಬ ನಿದ್ದೆ ಇಲ್ದ ಈ ಸುಗ್ಗಿ ಕಾಲ್ದಾಗ ಎಣ್ಣು-ಗೊಂಡು ಸರಿಬರೆ ಬದ್ಕು ಮಾಡೋರು. ಅಚ್ಚ ಕಾಲ ಬಂದ್ರೆ ಸಾಕು. ಎಂತ ಹುಮ್ಮಸ್ಸು, ಏನ್ ಆನಂದ ಅದೆಲ್ಲ ಹೇಳಕ ಬಾಯೇ ಸಾಕಾಗಕಲ್ಲ.

      ಬಂಟದಾಕಿ(ಗುಂಪಿನ ನಾಯಕಿ) ಗಂಗವ್ವ ಸರಿ ಸರ್ರಿ ಅನ್ನಂತ ಎಲ್ಲಾರ ಗಾಡ್ಯಾಗ ಕುಂದ್ರಿಸಿ. ತನಿಗಿ ಕುಂದ್ರಾಕಿಲ್ಲ ಹೋಗ ಗಾಡ್ಯಾಗ ನಿಂತೆ ಎಲ್ಲಾರಿಗೆ ಹುಮ್ಮಸ್ಸು ತುಂಬಾಕಿ. ಅಲ್ಯಾವ ಜಾತಿಲ್ಲ, ಧರ್ಮಿಲ್ಲ, ಸೊಣ್ಣೂರು, ದೊಡ್ಡರು ಅಂಬದು ಮೊದ್ದೇ ಇಲ್ಲ ಬದು ಮಾಡಾಕೂ ಮೊದ್ಲು ಇವು. ಅಮ್ಮ ಗಂಗವ್ವನ ಬಂಟ ಅಂದ್ರೆ ಸುತ್ತಳ್ಳಿಗೆಸ್ರು, ನಾರಚೊಗಡ್ಯಾಗ ನೋಡೋಕು ಅವು ಪರಾಕ್ರಮ, ಹುಮ್ಮಸ್ಸು. ಐಕ್ಯತೆ, ಆನಂದ, ಸಹಕಾರ, ಪದಾಡಾದು, ಒಡುಪೇಳದು, ನಕ್ಲಿಕತೆ ಏಳದು. ತಂಗಾಳ್ಯಾಗವು ಕುಣ್ಣಟ, ಗುದ್ದಾಟ ಎಲ್ಲಾನೂ ಸರೆಬರಿ ಆಗಿರ್ತತ.

      ಉಂಬವತ್ತಾಗ ಸುತ್ತೂರ ಕುಂತು ಅತ್ತಾರ್ಮಂದಿ ಬುತ್ತಿ ಬಿಚ್ಚಿ ಎಲ್ಲಾ ಒಮ್ಮೆಲೆ ಕಲ್ಪಿ, ವಡ್ಡಿನ ಮ್ಯಾಗ ಕುಂತ ಗೊಂಡಿಸಿಗಿ ನೀಡಿಕೊಟ್ಟು, ಬಂಡಿಜಾಡ್ಯಾಗ ವುಡುಗ್ರು ಎಣ್ಮಕ್ಕು ಸುತ್ತ ಕುಂತು. ಚೂಣ್ಯಕ ಜ್ವಾಳುದ್ರಟ್ಟಿ ಈ ಚಚ್ಚೆರಟ್ಟಿ ಜತಿಗಿ ಎಲ್ಲಾರು ತಂದ ವಿವಿಧ ತರಕಾರಿ ಪಲ್ಲೆನ ತಿಂಬದಂದ್ರ ಬಲು ಚಂದ ಆಮ್ಯಾಗ ಬಟ್ಯಾಗ ಕಲ್ಲಿದನ್ನ ಅದ್ರುಕೂಡ ಹಸೆ ಮೆಣಸಿನಕಾಯಿ ಕಡೆದಂದ್ರೆ, ಭಾರಿ ಆನಂದ ಕಾರ ಆದ್ರೂ ನಿರ್ ಕುಡಿಲಾರರು. ಒಬ್ಬೊಬ್ಬರಿಗಿ ಗಾಳಿಗೆತ್ತೊರು, ನಲ್ಲಿ ಮಾಡೊರು, ಅಲ್ಲವ್ರ ತಣ್ಣಗೆ ಬೀಸೊ ಗಾಳಿಕಿನ ಸ್ವತಂತ್ರರು ಮತ್ತೆ ಅವರ ಆನಂದ ಕಂಡು ಗಾಳಿ-ಸೂರ್ಯಗುಡ ಅಸೂಯೆಪಟ್ಟು ಅವರ ಪ್ರಭಾವ ಹೆಚ್ಚಿಸಿದಂಗೆ ಕಾಣುತ್ತೆ.

      ಗುಡ್ಡಿ ಬಟ್ಕ ಮಾಡೊರಿವು ಒಂದೊಂದಿನ ಮುಗೆ ವಲ ಇದ್ರೆ ರಾತ್ರಿ ಹೊತ್ತಾದ್ರನ್ನ ಬುಡದಿಲ್ಲ. ಗಾಡಿ ಲೈಟ್ ಆಕಿ ಅದೇ ಬೆಳ್ಳನ್ಯಾಗ ನಾರಚೂರು. ಒತ್ತು ರಾತ್ರಿ ಎಂಟಾದ್ರು ಸರೆ ಅತ್ತಾದ್ರು ಸರೆ ಆಗಿಮಾಡತನ ಬುಡ ಮಾತೇ ಇಲ್ಲ. ಅದೇ ಹುಮ್ಮಸ್ಸುಲ್ಲೆ ಬದು ಮಾಡಿ ಸರಿವತ್ತಾಗ ಮನಿಗಿ ಬಂದು ಮನೆಬದ್ದೆಲ್ಲ ಬ್ಯಾಸಿಲ್ಲೆ ಮಾಡಿ ಉಂಡು ನೆಮ್ಮಿಲಿದ್ದ ನಿದ್ದೆ ಮಾಡೊರು. ಈ ಬಂಟದವನ್ನ ನೋಡಿ ನನಗೆ ನೆನಪಾಗಿದ್ದು, ಜಗತ್ತು ಹಸಿದಿರುವುದು ಅನ್ನಕ್ಕಲ್ಲ. ಪ್ರೀತಿ, ಭ್ರಾತೃತ್ವ, ಸಹಕಾರ, ಶಾಂತಿಗಾಗಿ ಎಂದು ಅನ್ನಿಸಿತು.

ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...